Dhananjay: ‘ಪುಷ್ಪ 2’ ಚಿತ್ರದ ಶೂಟಿಂಗ್ ಬಗ್ಗೆ ಧನಂಜಯ್ ಕೊಟ್ರು ಅಪ್ಡೇಟ್
ತೆಲುಗಿನ ‘ಪುಷ್ಪ’ ಸಿನಿಮಾದಲ್ಲಿ ಧನಂಜಯ್ ವಿಲನ್ ಪಾತ್ರ ಮಾಡಿದ್ದಾರೆ. ಎರಡನೇ ಭಾಗದಲ್ಲೂ ಅವರ ಪಾತ್ರ ಮುಂದುವರಿಯುತ್ತಿದೆ.
ಧನಂಜಯ್ (Dhananjay) ಅವರು ಹಲವು ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆ ನಿರ್ಮಾಣದಲ್ಲೂ ಅವರು ತೊಡಗಿಕೊಂಡಿದ್ದಾರೆ. ಅವರು ತೆಲುಗಿನ ‘ಪುಷ್ಪ’ ಸಿನಿಮಾದಲ್ಲಿ (Pushpa Movie) ವಿಲನ್ ಪಾತ್ರ ಮಾಡಿದ್ದಾರೆ. ಎರಡನೇ ಭಾಗದಲ್ಲೂ ಅವರ ಪಾತ್ರ ಮುಂದುವರಿಯುತ್ತಿದೆ. ಈ ಚಿತ್ರದ ಶೂಟಿಂಗ್ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ‘ಪುಷ್ಪ 2 ಚಿತ್ರತಂಡದ ಜತೆಗೆ ಇನ್ನಷ್ಟೇ ಮೀಟಿಂಗ್ ಆಗಬೇಕಿದೆ’ ಎಂದಿದ್ದಾರೆ ಧನಂಜಯ್. ಈ ಮೂಲಕ ಸದ್ಯಕ್ಕೆ ಶೂಟಿಂಗ್ ಆರಂಭವಾಗುವ ಸೂಚನೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ