Dhananjay: ಮಿಡಲ್ ಕ್ಲಾಸ್ ಮಕ್ಕಳಿಗೆ ತಂದೆ- ತಾಯಿನೇ ಹೀರೋ; ‘ಬಡವ ರಾಸ್ಕಲ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತು

Badava Rascal: ‘ಬಡವ ರಾಸ್ಕಲ್’ ಚಿತ್ರತಂಡದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಟ ಧನಂಜಯ್ ಚಿತ್ರದ ಕುರಿತು ಮಾಹಿತಿ ತೆರೆದಿಟ್ಟಿದ್ದಾರೆ. ಮಧ್ಯಮ ವರ್ಗದ ಕತೆಯನ್ನು ಚಿತ್ರ ಕಟ್ಟಿಕೊಡಲಿದೆ ಎಂದು ಅವರು ಹೇಳಿದ್ದಾರೆ.

Dhananjay: ಮಿಡಲ್ ಕ್ಲಾಸ್ ಮಕ್ಕಳಿಗೆ ತಂದೆ- ತಾಯಿನೇ ಹೀರೋ; ‘ಬಡವ ರಾಸ್ಕಲ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತು
| Updated By: shivaprasad.hs

Updated on: Dec 14, 2021 | 10:15 AM

ಸೋಮವಾರ (ಡಿಸೆಂಬರ್​ 13) ‘ಬಡವ ರಾಸ್ಕಲ್​’ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದ್ದು, ಸಿನಿ ಪ್ರೇಮಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಹೀರೋ ಆಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ. ನಟ ಧನಂಜಯ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ್ದಾರೆ. ‘‘ಬಡವ ರಾಸ್ಕಲ್ ಚಿತ್ರ ಸಂಪೂರ್ಣ ಮಿಡಲ್ ಕ್ಲಾಸ್ ಮಾಸ್ ಎಂಟರ್​​ಟೈನರ್ ಚಿತ್ರವಾಗಿದೆ. ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುವ ಸಂದರ್ಭದ ಘಟನೆಗಳನ್ನು ಇಟ್ಟುಕೊಂಡು ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಆ ವಯಸ್ಸಿನ ಗೊಂದಲ, ತಲ್ಲಣಗಳನ್ನು ಕಟ್ಟಿಕೊಡಲಾಗಿದೆ’’ ಎಂದು ಧನಂಜಯ್ ಹೇಳಿದ್ದಾರೆ.

‘‘ಪ್ರತಿ ಮಿಡಲ್ ಕ್ಲಾಸ್ ಮಕ್ಕಳಿಗೆ ತಂದೆ- ತಾಯಿಮೇ ಹೀರೋ. ಕಾರಣ ಅವರು ಮಕ್ಕಳ ಬದುಕನ್ನು ರೂಪಿಸಲು ಅವರು ಬಹಳಷ್ಟು ತ್ಯಾಗಗಳನ್ನು ಮಾಡಿರುತ್ತಾರೆ. ಅಂತಹ ಕತೆಯನ್ನು ಚಿತ್ರ ಒಳಗೊಂಡಿದೆ’’ ಎಂದು ಧನಂಜಯ್ ಚಿತ್ರದ ಕುರಿತು ಮಾಹಿತಿ ತೆರೆದಿಟ್ಟಿದ್ದಾರೆ.

ಬಡವ ರಾಸ್ಕಲ್ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್​ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಚಿತ್ರವು ಡಿಸೆಂಬರ್ 24ರಂದು ತೆರೆಗೆ ಬರಲಿದೆ.

ಇದನ್ನೂ ಓದಿ:

‘ಬಡವ ರಾಸ್ಕಲ್​’ನಲ್ಲಿ ಏನೆಲ್ಲ ಇದೆ? ಡಾಲಿ ಧನಂಜಯ್​ ಮಾತು

ಫ್ರೆಂಡ್ಸ್​ ಅಂದ್ರೆ ಪ್ರಾಣ ಕೊಡೋಕೂ ರೆಡಿ ‘ಬಡವ ರಾಸ್ಕಲ್’; ಹೈಪ್ ಸೃಷ್ಟಿಸಿದ ಧನಂಜಯ ನಟನೆಯ​ ಸಿನಿಮಾ ಟ್ರೇಲರ್

Follow us