ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್ ಹೀಗೆ ಹೇಳಿದ್ದೇಕೆ?
ನಟ ಡಾಲಿ ಧನಂಜಯ ಅವರು ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಬಿಡುಗಡೆ ಆಗಿದ್ದು, ಕೆಲವರು ನೆಗೆಟಿವ್ ಪ್ರಚಾರ ಮಾಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಧನಂಜಯ ಅವರು ಮಾತನಾಡಿದ್ದಾರೆ. ‘ಮುಂದಿನ ಸಿನಿಮಾಗಳನ್ನು ನಾವು ರಿಲೀಸ್ ಮಾಡುವಾಗ ಕೋರ್ಟ್ ಆರ್ಡರ್ ಇಟ್ಟುಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ನಟ ಡಾಲಿ ಧನಂಜಯ (Daali Dhananjay) ಅವರು ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಬಿಡುಗಡೆ ಆಗಿದ್ದು, ಕೆಲವರು ನೆಗೆಟಿವ್ ಪ್ರಚಾರ ಮಾಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಧನಂಜಯ ಅವರು ಮಾತನಾಡಿದ್ದಾರೆ. ‘ನೆಗೆಟಿವ್ ವಿಮರ್ಶೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ನನಗೆ ಇಷ್ಟ ಇರಲಿಲ್ಲ. ತಮ್ಮ ತಂಡದವರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದೆ. ನಮ್ಮ ಈ ಹಿಂದಿನ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗಲೂ ಕೆಲವರು ನೆಗೆಟಿವ್ ಮಾಡಿದ್ದರು. ನಮ್ಮ ಸಿನಿಮಾಗೆ ಮಾತ್ರವಲ್ಲ, ಬೇರೆ ನಟರ ಸಿನಿಮಾಗಳಿಗೂ ಈ ರೀತಿ ಅಪಪ್ರಚಾರ ಮಾಡುವ ಒಂದು ವರ್ಗ ಇದ್ದೇ ಇರುತ್ತದೆ. ಸಿನಿಮಾ ಚೆನ್ನಾಗಿ ಇದ್ದಾಗ ಅದನ್ನು ಯಾರೂ ತಡೆಯೋಕೆ ಆಗಲ್ಲ. ವಿಮರ್ಶೆಗಳನ್ನು ನಾವು ತೆಗೆದುಕೊಳ್ಳಬೇಕು. ಆದರೆ ಸಿನಿಮಾವನ್ನು ಸಂಪೂರ್ಣ ತೆಗೆದುಹಾಕುವುದು ಬೇರೆ. ಮುಂದಿನ ಸಿನಿಮಾಗಳನ್ನು ನಾವು ರಿಲೀಸ್ ಮಾಡುವಾಗ ಕೋರ್ಟ್ ಆರ್ಡರ್ ಇಟ್ಟುಕೊಳ್ಳಬೇಕಾಗುತ್ತದೆ. ಅದರಿಂದ ನೆಗೆಟಿವ್ ಮಾಡುವವರ ಕಂಟೆಂಟ್ ಡಿಲೀಟ್ ಆಗುತ್ತದೆ. ಪ್ರೇಕ್ಷಕರ ಮೇಲೆ ಸಿನಿಮಾ ನಿಂತುಕೊಳ್ಳುತ್ತದೆ’ ಎಂದು ಧನಂಜಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್ನಾಗ್ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ

