Daali Dhananjay: ‘ಪ್ರೀತಿಸಿದ ಹುಡುಗಿ ಸಿಗಬಾರದು, ಆ ನೋವಲ್ಲಿ ನೂರು ಕವಿತೆ ಬರಿತೀನಿ’: ಡಾಲಿ ಧನಂಜಯ್​

| Updated By: ಮದನ್​ ಕುಮಾರ್​

Updated on: Sep 14, 2022 | 9:21 AM

Monsoon Raaga: ‘ಮಾನ್ಸೂನ್​ ರಾಗ’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ ಅದ್ದೂರಿಯಾಗಿ ನಡೆದಿದೆ. ಈ ವೇದಿಕೆಯಲ್ಲಿ ಒನ್​ ಸೈಡ್​ ಲವ್​ ಬಗ್ಗೆ ಡಾಲಿ ಧನಂಜಯ್​ ಮಾತನಾಡಿದ್ದಾರೆ.

ನಟ ಡಾಲಿ ಧನಂಜಯ್​ (Daali Dhananjay) ಅವರು ಸ್ಟಾರ್​ ಕಲಾವಿದನಾಗಿ ಬೆಳೆದು ನಿಂತಿದ್ದಾರೆ. ಬಹುಭಾಷೆಯ ಚಿತ್ರರಂಗದಲ್ಲಿ ಅವರಿಗೆ ಡಿಮ್ಯಾಂಡ್​ ಇದೆ. ಈಗ ಅವರು ನಟಿಸಿರುವ ‘ಮಾನ್ಸೂನ್​ ರಾಗ’ (Monsoon Raaga) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮಂಗಳವಾರ (ಸೆ.13) ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ನಡೆಯಿತು. ಚಿತ್ರದಲ್ಲಿ ನಟಿಸಿರುವ ಸುಹಾನಿಸಿ (Suhasini Maniratnam) ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಟೈಮ್ ಟ್ರಾವೆಲ್​ ಮೂಲಕ ​ಒಂದಷ್ಟು ವರ್ಷಗಳ ಹಿಂದಕ್ಕೆ ಹೋಗಿ, ಸುಹಾನಿಸಿ ಜೊತೆ ‘ಬಂಧನ’ ರೀತಿ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಡಾಲಿ ತೋಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ನಾಯಕನಿಗೆ ಪ್ರೀತಿಸಿದ ಹುಡುಗಿ ಸಿಗೋದಿಲ್ಲ. ಆ ರೀತಿ ಒನ್​ ಸೈಡ್​ ಲವ್​ ಆದರೆ ನೂರಾರು ಕವಿತೆ ಬರೆಯುವುದಾಗಿ ಧನಂಜಯ್​ ಹೇಳಿದ್ದಾರೆ.

 

Published on: Sep 14, 2022 09:21 AM