ಧನಂಜಯ್ ಹುಟ್ಟೂರಲ್ಲಿ ವಿವಾಹ ಶಾಸ್ತ್ರ; ಕೆಂಡ ಹಾಯ್ದ ಡಾಲಿ

Updated on: Feb 13, 2025 | 11:11 AM

ಡಾಲಿ ಧನಂಜಯ್ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ವೇದಿಕೆ ಕೂಡ ಸಿದ್ಧವಾಗಿದೆ. ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಧನಂಜಯ್ ಅವರು ಮದುವೆ ಆಗುತ್ತಿದ್ದಾರೆ. ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆ. ಧನಂಜಯ್ ಬಾಳಲ್ಲಿ ಡಾಕ್ಟರ್ ಆಗಮನ ಆಗಿರೋದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.  

ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ಡಾಲಿ-ಧನ್ಯತಾ ವಿವಾಹ ನೆರವೇರಲಿದೆ. ಡಾಲಿ ಧನಂಜಯ್ ಅವರ ಮನೆಯಲ್ಲಿ ವಿವಾಹ ಶಾಸ್ತ್ರಗಳು ಆರಂಭ ಆಗಿವೆ. ಮದುವೆಗೂ ಮೊದಲೂ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ ಮನೆ ಮಾಡಿದೆ. ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರದಲ್ಲಿ ಡಾಲಿ ಧನಂಜಯ ಕೆಂಡ ತುಳಿದಿದ್ದಾರೆ. ನಂತರ ಮನೆಯಲ್ಲಿ ಮನೆದೇವರ ಪೂಜೆಯನ್ನು ಧನಂಜಯ ಪೂರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us