‘ಮುಂಬೈನಲ್ಲಿ ಹುಡುಕಿದ್ರೂ ಈ ಥರ ಗುರಿ, ಗುಂಡಿಗೆ ಇರೋನು ಸಿಗಲ್ಲ’: ‘ಕೋಟಿ’ ಪರಿಚಯ

|

Updated on: Jun 05, 2024 | 10:39 PM

‘ಕೋಟಿ’ ಟ್ರೇಲರ್​ ರಿಲೀಸ್​ ಮಾಡಲಾಗಿದೆ. ಈ ಸಮಾರಂಭದಲ್ಲಿ ನಟ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ಈ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಎಂದು ಕೇಳಿದ ಪ್ರಶ್ನೆಗೆ ಧನಂಜಯ ಉತ್ತರಿಸಿದ್ದಾರೆ. ಈ ಸಿನಿಮಾಗೆ ಪರಮ್​ ನಿರ್ದೇಶನ ಮಾಡಿದ್ದು, ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.

ಜೂನ್​ ತಿಂಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾಗಳಲ್ಲಿ ‘ಕೋಟಿ’ (Kotee Movie) ಹೆಚ್ಚು ನಿರೀಕ್ಷೆ ಮೂಡಿಸಿದೆ. ಪರಮ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ನಟ ಧನಂಜಯ್​ ಅವರು ಕೋಟಿ ಎಂಬ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂದು (ಜೂನ್​ 5) ಸಿನಿಮಾ ಟ್ರೇಲರ್​ (Kotee Trailer) ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ಕೋಟಿ’ ಸಿನಿಮಾವನ್ನು ಜನರು ಯಾಕೆ ನೋಡಬೇಕು ಎಂದು ಕೇಳಿದ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ. ‘ಈಗ ತಾನೇ ಟ್ರೇಲರ್​ನಲ್ಲಿ ಡೈಲಾಗ್​ ಕೇಳಿದ್ರಲ್ಲ. ಕೋಟಿ ಅಂತ ಹೊಸ ಹುಡುಗ. ಸೌತ್​ನಲ್ಲಿ ಮಾತ್ರವಲ್ಲ ಮುಂಬೈನಲ್ಲಿ ಹುಡುಕಿದರೂ ಕೂಡ ಈ ಥರ ಗುರಿ ಮತ್ತು ಗುಂಡಿಗೆ ಇರೋನು ಸಿಗಲ್ಲ ಅಂತ. ಆ ಕಾರಣಕ್ಕಾಗಿ ಜನ ಕೋಟಿ ಸಿನಿಮಾವನ್ನು ನೋಡಬೇಕು. ಇದು ನನಗೆ ಹೊಸ ಕಥೆ, ಹೊಸ ಪಾತ್ರ. ಇದು ನನಗೆ ತುಂಬ ಇಷ್ಟ ಆಗಿರುವ ಕಥೆ’ ಎಂದು ಡಾಲಿ ಧನಂಜಯ (Daali Dhananjaya) ಹೇಳಿದ್ದಾರೆ. ಜೂನ್​ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.