Daily Devotional: ಭಕ್ತಿ ಎಂದರೇನು, ನಿಜವಾದ ಭಕ್ತಿ ಹೇಗಿರುತ್ತೆ? ಈ ವಿಡಿಯೋ ನೋಡಿ

|

Updated on: Jun 24, 2024 | 6:43 AM

ಭಕ್ತಿ ಎಂದರೇನು? ಶರಣಾಗುವುದೇ? ಕಷ್ಟ ಬರುವುದೆಂಬ ಭಯದಿಂದ ಸೇವೆಮಾಡುವುದೇ? ಅಥವಾ ಅಗರ್ಬತ್ತಿ, ದೀಪ, ನೈವೇದ್ಯವೆಂದು ಪೂಜೆ ಮಾಡುವುದೇ? ಎಂಬಿತ್ಯಾದಿ ಪ್ರಶ್ನೆಗಳ ಸಾಲುಗಳು ಮೂಡಿಬರುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.

ಸಂಸಾರ ಚಕ್ರದಲ್ಲಿ ತಿರುಗುತ್ತಿರುವ ನಾವು ಈ ಹಾಲಾಹಲದಿಂದ ಮುಕ್ತರಾಗಿ ಆನಂದ ಸ್ಥಿತಿಯನ್ನು ಅನುಭವಿಸಲು ಹವಣಿಸುತ್ತಿರುವುದು ಮತ್ತು ಹೇಗೆ ಇದರಿಂದ ಪಾರಾಗುವುದು ಎಂದು ಚಿಂತಿಸುತ್ತಾ ನಮ್ಮ ವಯೋಮಾನವನ್ನು ಕಳೆದುಬಿಡುತ್ತಿದ್ದೇವೆ. ಇದಕ್ಕೆ ಕೆಲವು ದಾರಿಗಳಿವೆ. ಅದರಲ್ಲೊಂದಾದ ಮತ್ತು ಸುಲಭ ಸಾಧ್ಯವಾದ ಸಾಧನವೇ ಭಕ್ತಿ. ಏನೀದು ಭಕ್ತಿ? ಶರಣಾಗುವುದೇ? ಕಷ್ಟ ಬರುವುದೆಂಬ ಭಯದಿಂದ ಸೇವೆಮಾಡುವುದೇ? ಅಥವಾ ಅಗರ್ಬತ್ತಿ, ದೀಪ, ನೈವೇದ್ಯವೆಂದು ಪೂಜೆ ಮಾಡುವುದೇ ? ಎಂಬಿತ್ಯಾದಿ ಪ್ರಶ್ನೆಗಳ ಸಾಲುಗಳು ಮೂಡಿಬರುತ್ತದೆ. ಇದಕ್ಕೆ ಪೂರಕವೆಂಬಂತೆ ಜಗತ್ತಿನಲ್ಲಿ ಮೂಢನಂಬಿಕೆಯ ಹೇರಿಕೆಯೂ ಕಾಣಸಿಗುತ್ತದೆ. ಹಾಗಾದರೆ ಈ ರೀತಿ ಆಗಲು ಕಾರಣವೇನು? ಈ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.

Follow us on