ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿರುವ ಬಿಎಸ್ ಯಡಿಯೂರಪ್ಪರಿಂದ ಧರ್ಮಸ್ಥಳ ಭೇಟಿ, ಮಂಜುನಾಥನಿಗೆ ಪೂಜೆ
ರಾಜ್ಯ ಇನ್ನೂ ಬರಗಾಲದ ಛಾಯೆಯಲ್ಲಿದೆ, ಸಕಾಲದಲ್ಲಿ ಒಳ್ಳೆಯ ಮಳೆ ಬೆಳೆಯಾಗಲಿ, ರಾಜ್ಯದಲ್ಲಿ ಸುಭಿಕ್ಷೆ ತಲೆದೋರಲಿ, ಮುಂಬರುವ ದಿನಗಳು ರೈತರಿಗೆ ಮತ್ತು ನಾಡಿನ ಎಲ್ಲ ಜನರಿಗೆ ಒಳ್ಳೆಯದಾಗುವಂತೆ ಮಾಡೆಂದು ಮಂಜುನಾಥನಿಗೆ ಪ್ರಾರ್ಥಿಸಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ದಕ್ಷಿಣ ಕನ್ನಡ: ಲೋಕಸಭಾ ಚುನಾವಣೆಯಲ್ಲಿ (Lok Sabha polls) ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವನ್ನು (BJP-JDS alliance) ಭಾರೀ ಗೆಲುವಿನೆಡೆ ನಡೆಸಿದ ನಂತರ ಖುಷಿಯಿಂದ ಬೀಗುತ್ತಿರುವ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ದೇವರ ದರ್ಶನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಹಳ ದಿನಗಳ ನಂತರ ಧರ್ಮಸ್ಥಳಕ್ಕೆ ಬಂದಿದ್ದೇನೆ, ನಿನ್ನೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಹೇಳಿದರು. ರಾಜ್ಯ ಇನ್ನೂ ಬರಗಾಲದ ಛಾಯೆಯಲ್ಲಿದೆ, ಸಕಾಲದಲ್ಲಿ ಒಳ್ಳೆಯ ಮಳೆ ಬೆಳೆಯಾಗಲಿ, ರಾಜ್ಯದಲ್ಲಿ ಸುಭಿಕ್ಷೆ ತಲೆದೋರಲಿ, ಮುಂಬರುವ ದಿನಗಳು ರೈತರಿಗೆ ಮತ್ತು ನಾಡಿನ ಎಲ್ಲ ಜನರಿಗೆ ಒಳ್ಳೆಯದಾಗುವಂತೆ ಮಾಡೆಂದು ಮಂಜುನಾಥನಿಗೆ ಪ್ರಾರ್ಥಿಸಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bharat Ratna LK Advani: ಎಲ್ಕೆ ಅಡ್ವಾಣಿಗೆ ಭಾರತ ರತ್ನ: ಬಿಎಸ್ ಯಡಿಯೂರಪ್ಪ ಸೇರಿ ಕರ್ನಾಟಕ ಬಿಜೆಪಿ ನಾಯಕರ ಹರ್ಷ