ದೇವಾಲಯದಲ್ಲಿ ಅರಳಿ ಮತ್ತು ಬೇವಿನ ಮರವಿರುವುದರ ಹಿಂದಿನ ರಹಸ್ಯ ತಿಳಿಯಿರಿ

Updated on: Aug 30, 2025 | 6:53 AM

ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅರಳಿಮರವು ಶ್ರೀಮನ್ ನಾರಾಯಣನ ಸ್ವರೂಪವಾಗಿಯೂ, ಬೇವಿನಮರವು ಶ್ರೀ ಮಹಾಲಕ್ಷ್ಮೀ ತಾಯಿಯ ಸ್ವರೂಪವಾಗಿಯೂ ಪರಿಗಣಿಸಲ್ಪಡುತ್ತದೆ. ಈ ಮರಗಳ ದರ್ಶನ ಮತ್ತು ಪೂಜೆಯು ಧಾರ್ಮಿಕ ಮತ್ತು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 30: ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳನ್ನು ಸಾಮಾನ್ಯವಾಗಿ ಕಾಣಬಹುದು. ಈ ಮರಗಳು ಕೇವಲ ನೆರಳು ಮತ್ತು ಸೌಂದರ್ಯವನ್ನು ಮಾತ್ರವಲ್ಲ, ಧಾರ್ಮಿಕ ಮಹತ್ವವನ್ನೂ ಹೊಂದಿವೆ. ಭಕ್ತಿಯ ಪ್ರಕಾರ, ಅರಳಿಮರವು ಶ್ರೀಮನ್ ನಾರಾಯಣನ ಸ್ವರೂಪವಾಗಿದ್ದರೆ, ಬೇವಿನಮರವು ಶ್ರೀ ಮಹಾಲಕ್ಷ್ಮೀ ತಾಯಿಯ ಸ್ವರೂಪವಾಗಿದೆ. ಅಶ್ವತ್ಥ ವೃಕ್ಷ (ಬೋಧಿವೃಕ್ಷ)ವು ವಿಶೇಷ ಮಹತ್ವವನ್ನು ಹೊಂದಿದ್ದು, ಶನಿ ದೋಷಗಳ ನಿವಾರಣೆಗೆ ಸಹಾಯಕವಾಗಿದೆ ಎಂದು ನಂಬಲಾಗಿದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More