Daily Devotional: ಮನೆ ಮೇಲೆ ದೃಷ್ಟಿ ಬಿದ್ದರೆ ಕಂಡುಹಿಡಿಯುವುದು ಹೇಗೆ? ವಿಡಿಯೋ ನೋಡಿ

| Updated By: ವಿವೇಕ ಬಿರಾದಾರ

Updated on: Apr 30, 2024 | 6:53 AM

ಮನೆಯಲ್ಲಿ ಅಜ್ಜಿ, ಅಮ್ಮ ಯಾರದೋ ಕೆಟ್ಟ ದೃಷ್ಟಿ ತಾಗದೇ ಇರಲಿ ಎಂದು ಹೇಳಿಕೊಂಡು ವಿಧ ವಿಧಾನಗಳಿಂದ ಉಪಚಾರ ಮಾಡುವುದನ್ನು ನೋಡಿದ್ದೇವೆ. ಮನೆ ಮೇಲೂ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಗಳಿರುತ್ತದೆ. ಮನೆ ಮೇಲೆ ಬಿದ್ದ ದೃಷ್ಟಿಯನ್ನು ಕಂಡು ಹಿಡಿಯುವುದು ಹೇಗೆ? ವಿಡಿಯೋ ನೋಡಿ

ಕೆಟ್ಟ ದೃಷ್ಟಿ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾರದ್ದೂ ಕೆಟ್ಟ ದೃಷ್ಟಿ ತಾಗದೇ ಇರಲಿ ಎಂದು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದನ್ನು ನಾವು ನೋಡುತ್ತೇವೆ. ಮನೆಯಲ್ಲಿ ಅಜ್ಜಿ, ಅಮ್ಮ ಯಾರದೋ ಕೆಟ್ಟ ದೃಷ್ಟಿ ತಾಗದೇ ಇರಲಿ ಎಂದು ಹೇಳಿಕೊಂಡು ವಿಧ ವಿಧಾನಗಳಿಂದ ಉಪಚಾರ ಮಾಡುವುದನ್ನು ನೋಡಿದ್ದೇವೆ. ಮನೆ ಮೇಲೂ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ನೀವು ಅಶೋಕ ಮರದ ಎಲೆಗಳನ್ನು ಉರುಟುರುಟಾಗಿ ಸುತ್ತಿ ಹಾರ ಮಾಡಿ, ಮನೆಯ ಬಾಗಿಲಿಗೆ ನೇತು ಹಾಕಿ. ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುತ್ತದೆ. ಜೊತೆಗೆ ಕೆಟ್ಟ ದೃಷ್ಟಿಯ ಪ್ರಭಾವ ಸಮಾಪ್ತವಾಗುತ್ತದೆ. ಮನೆಗೆ ಬಿದ್ದ ದೃಷ್ಟಿ ತೆಗೆಯಬೇಕಾದರೆ, ಕಪ್ಪು ಕುದುರೆಯ ಲಾಳ ತಂದು ಅದನ್ನು ಸಾಸಿವೆ ಎಣ್ಣೆಯಲ್ಲಿ ಅದ್ದಿ. ನಂತರ ಮುಖ್ಯ ದ್ವಾರ ಬಾಗಿಲಿಗೆ ನೇತುಹಾಕಿ. ಇದಾದ ಮೇಲೆ ನಿಮ್ಮ ಮನೆಗೆ ಯಾರ ಕೆಟ್ಟ ದೃಷ್ಟಿ ಕೂಡಾ ತಾಗುವುದಿಲ್ಲ.