ಕಾರಲ್ಲಿ ದೇವರ ವಿಗ್ರಹ ಇಡುವುದಕ್ಕೂ ಮುನ್ನ ಈ ವಿಡಿಯೋ ನೋಡಿ
ಕಾರಿನಲ್ಲಿ ದೇವರ ವಿಗ್ರಹ ಇಡುವುದು ಅನೇಕರ ನಂಬಿಕೆಯಾಗಿದೆ. ಕಾರಿನಲ್ಲಿ ಯಾವ ದೇವರ ವಿಗ್ರಹವನ್ನು ಹೇಗೆ ಮತ್ತು ಎಲ್ಲಿ ಇಡಬೇಕು ಎಂಬುದರ ಬಗ್ಗೆ ಡಾ. ಬಸವರಾಜ್ ಗುರೂಜಿ ಅವರು ಸ್ಪಷ್ಟವಾದ ಮಾರ್ಗದರ್ಶನ ನೀಡಿದ್ದಾರೆ. ಗಣೇಶ, ಅಭಯಾಂಜನೇಯ ಮುಂತಾದ ವಿಗ್ರಹಗಳನ್ನು ಆಯ್ಕೆ ಮಾಡುವುದು ಮತ್ತು ಅವುಗಳನ್ನು ಸರಿಯಾಗಿ ಇಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
ಬೆಂಗಳೂರು, ಆಗಸ್ಟ್ 31: ಸಾಮಾನ್ಯವಾಗಿ ಕಾರಿನಲ್ಲಿ ದೇವರ ವಿಗ್ರಹಗಳನ್ನು ಇಡಲಾಗುತ್ತದೆ. ಈ ಕುರಿತಾಗಿ ಡಾ. ಬಸವರಾಜ್ ಗುರೂಜಿ ಅವರು ಈ ವಿಷಯದ ಕುರಿತು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಗಣೇಶನ ಸಣ್ಣ ವಿಗ್ರಹವನ್ನು ಎಡಗೈ ಬದಿಯಲ್ಲಿ ಇಡುವುದು ಶುಭ. ಅಭಯಾಂಜನೇಯನ ವಿಗ್ರಹವನ್ನು ಇಡುವುದು ಕೂಡ ಉತ್ತಮ. ವಾಹನಕ್ಕೆ ಹತ್ತಿದಾಗ ವಿಗ್ರಹಕ್ಕೆ ನಮಸ್ಕಾರ ಮಾಡುವುದರಿಂದ ಮನಶಾಂತಿ ಮತ್ತು ಶುಭ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
Published on: Aug 31, 2025 06:55 AM
