AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6: ಆಸಿಫ್ ಖಾನ್ ಸಿಡಿಲಬ್ಬರಕ್ಕೆ ನಡುಗಿದ ಪಾಕ್ ಬೌಲರ್​ಗಳು

6,6,6,6,6,6: ಆಸಿಫ್ ಖಾನ್ ಸಿಡಿಲಬ್ಬರಕ್ಕೆ ನಡುಗಿದ ಪಾಕ್ ಬೌಲರ್​ಗಳು

ಝಾಹಿರ್ ಯೂಸುಫ್
|

Updated on: Aug 31, 2025 | 7:27 AM

Share

United Arab Emirates vs Pakistan: ಕೇವಲ 35 ಎಸೆತಗಳನ್ನು ಎದುರಿಸಿದ ಆಸಿಫ್ ಖಾನ್ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಪಾಕ್ ಬೌಲರ್​ಗಳ ಬೆಂಡೆತ್ತಿದರು. ಈ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಆಸಿಫ್ ಯುಎಇ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ 35 ಎಸೆತಗಳಲ್ಲಿ 77 ರನ್​ಗಳಿಸಿ ಔಟಾಗುವ ಮೂಲಕ ತನ್ನ ಏಕಾಂಗಿ ಹೋರಾಟವನ್ನು ಅಂತ್ಯಗೊಳಿಸಿದರು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ 2ನೇ ಪಂದ್ಯದಲ್ಲೂ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಯುಎಇ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ ಪರ ಆರಂಭಿಕ ದಾಂಡಿಗ ಸೈಮ್ ಅಯ್ಯೂಬ್ (69) ಅರ್ಧಶತಕ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಸನ್ ನವಾಝ್ 56 ರನ್​ಗಳಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 207 ರನ್​ ಕಲೆಹಾಕಿತು.

208 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಎಇ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಕೇವಲ 76 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಆಸಿಫ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಕೇವಲ 35 ಎಸೆತಗಳನ್ನು ಎದುರಿಸಿದ ಆಸಿಫ್ ಖಾನ್ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಪಾಕ್ ಬೌಲರ್​ಗಳ ಬೆಂಡೆತ್ತಿದರು. ಈ ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಆಸಿಫ್ ಯುಎಇ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ 35 ಎಸೆತಗಳಲ್ಲಿ 77 ರನ್​ಗಳಿಸಿ ಔಟಾಗುವ ಮೂಲಕ ತನ್ನ ಏಕಾಂಗಿ ಹೋರಾಟವನ್ನು ಅಂತ್ಯಗೊಳಿಸಿದರು. ಪರಿಣಾಮ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 31 ರನ್​ಗಳ ಜಯ ಸಾಧಿಸಿತು.