AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Hundred: 42 ಎಸೆತಗಳಲ್ಲಿ ಅತಿ ವೇಗದ ಶತಕ ಬಾರಿಸಿದ 18 ವರ್ಷದ ಡೇವಿನಾ ಪೆರಿನ್

The Hundred: 42 ಎಸೆತಗಳಲ್ಲಿ ಅತಿ ವೇಗದ ಶತಕ ಬಾರಿಸಿದ 18 ವರ್ಷದ ಡೇವಿನಾ ಪೆರಿನ್

ಪೃಥ್ವಿಶಂಕರ
|

Updated on: Aug 30, 2025 | 9:24 PM

Share

Davina Perrin's Record-Breaking Century: 2025ರ ದಿ ಹಂಡ್ರೆಡ್ ಮಹಿಳಾ ಕ್ರಿಕೆಟ್‌ನಲ್ಲಿ 18 ವರ್ಷದ ಡೆವಿನಾ ಪೆರಿನ್ ಅವರು ಕೇವಲ 42 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಇದು ಮಹಿಳಾ ಹಂಡ್ರೆಡ್‌ನಲ್ಲಿ ಅತ್ಯಂತ ವೇಗದ ಶತಕ ಮತ್ತು ಈ ಆವೃತ್ತಿಯ ಮೊದಲ ಶತಕವಾಗಿದೆ. ಪೆರಿನ್ ಅವರ ಈ ಸಾಧನೆಯಿಂದ ಸೂಪರ್‌ಚಾರ್ಜರ್ಸ್ ತಂಡ 214 ರನ್ ಗಳಿಸಿತು, ಇದು ಮಹಿಳಾ ಹಂಡ್ರೆಡ್‌ನಲ್ಲಿ ಅತ್ಯಧಿಕ ಸ್ಕೋರ್ ಆಗಿದೆ.

ದಿ ಹಂಡ್ರೆಡ್ ವುಮೆನ್ಸ್ 2025 ಸೀಸನ್​ನಲ್ಲಿ 18 ವರ್ಷದ ಯುವ ಬ್ಯಾಟರ್ ಡೇವಿನಾ ಪೆರಿನ್ ಸ್ಫೋಟಕ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್ ಮತ್ತು ಲಂಡನ್ ಸ್ಪಿರಿಟ್ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಡೇವಿನಾ ಪೆರಿನ್ ಕೇವಲ 42 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪೆರಿನ್ ಆ ಬಳಿಕವೂ ಹೊಡಿಬಡಿ ಆಟ ಮುಂದುವರೆಸಿ ಕೇವಲ 42 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು.

ಡೇವಿನಾ ಪೆರಿನ್ ಬಾರಿಸಿದ ಶತಕ ಈ ಆವೃತ್ತಿಯ ಮೊದಲ ಶತಕವಾಗಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಮಹಿಳಾ ಹಂಡ್ರೆಡ್ ಲೀಗ್ ಇತಿಹಾಸದಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇವರಿಗಿಂತ ಮೊದಲು ಟ್ಯಾಮಿ ಬ್ಯೂಮಾಂಟ್ 2023 ರಲ್ಲಿ 118 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಈ ಶತಕದ ಇನ್ನಿಂಗ್ಸ್‌ನೊಂದಿಗೆ ಪೆರಿನ್ ಕೆಲವು ವಿಶೇಷ ದಾಖಲೆಗಳನ್ನು ನಿರ್ಮಿಸಿದ್ದು, ಮಹಿಳಾ ಹಂಡ್ರೆಡ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಯೂಮಾಂಟ್ ಶತಕ ಗಳಿಸಿದಾಗ, ಅವರಿಗೆ 32 ವರ್ಷ ವಯಸ್ಸಾಗಿತ್ತು. ಇದರ ಜೊತೆಗೆ ಇದು ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆಯೂ ಆಗಿದೆ. ಹಾಗೆಯೇ, ಪುರುಷರು ಮತ್ತು ಮಹಿಳೆಯರ ಹಂಡ್ರೆಡ್ ಇತಿಹಾಸದಲ್ಲಿ ಇದು ಎರಡನೇ ವೇಗದ ಶತಕವಾಗಿದೆ. ಪುರುಷರ ಹಂಡ್ರೆಡ್​ ದಾಖಲೆಯು 41 ಎಸೆತಗಳಲ್ಲಿ ಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ ಹೆಸರಿನಲ್ಲಿದೆ.

ಪೆರಿನ್ 43 ಎಸೆತಗಳಲ್ಲಿ 15 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 101 ರನ್ ಬಾರಿಸಿದರು. ಇವರ ಇನ್ನಿಂಗ್ಸ್‌ನ ಆಧಾರದ ಮೇಲೆ, ಸೂಪರ್‌ಚಾರ್ಜರ್ಸ್ 5 ವಿಕೆಟ್‌ಗಳ ನಷ್ಟಕ್ಕೆ 214 ರನ್ ಗಳಿಸಿತು, ಇದು ಮಹಿಳಾ ಹಂಡ್ರೆಡ್ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಆಗಿದೆ. ಪೆರಿನ್ ಹೊರತುಪಡಿಸಿ, ಫೋಬೆ ಲಿಚ್‌ಫೀಲ್ಡ್ 19 ಎಸೆತಗಳಲ್ಲಿ 35 ರನ್ ಗಳಿಸಿದರೆ, ನಿಕೋಲಾ ಕ್ಯಾರಿ 12 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು.