KCL 2025: ಒಂದೇ ಓವರ್ನಲ್ಲಿ 40 ರನ್! 12 ಎಸೆತಗಳಲ್ಲಿ 11 ಸಿಕ್ಸರ್ ಸಿಡಿಸಿದ ಸಲ್ಮಾನ್; ವಿಡಿಯೋ
Kerala Cricket League: ಕೇರಳ ಕ್ರಿಕೆಟ್ ಲೀಗ್‌ನ 19ನೇ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್ ಸ್ಟಾರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಠೃರ್ ಸಲ್ಮಾನ್ ನಿಜಾರ್ ಸಿಕ್ಸರ್ಗಳ ಮಳೆಗರೆದಿದ್ದಾರೆ. ಅವರು ಕೇವಲ 26 ಎಸೆತಗಳಲ್ಲಿ 86 ರನ್ ಗಳಿಸಿದರು, ಅದರಲ್ಲಿ 2 ಓವರ್‌ಗಳಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದರು. ಕ್ಯಾಲಿಕಟ್ ತಂಡವು ಕೊನೆಯ ಎರಡು ಓವರ್‌ಗಳಲ್ಲಿ 71 ರನ್ ಗಳಿಸಿತು.
ಕೇರಳ ಕ್ರಿಕೆಟ್ ಲೀಗ್‌ನ 19ನೇ ಪಂದ್ಯದಲ್ಲಿ ಅದಾನಿ ತಿರುವನಂತಪುರ ರಾಯಲ್ಸ್ ಹಾಗೂ ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡ 186 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಲ್ಮಾನ್ ನಿಜರ್ ಕೇವಲ 26 ಎಸೆತಗಳಲ್ಲಿ ಅಜೇಯ 86 ರನ್ಗಳ ಇನ್ನಿಂಗ್ಸ್ ಆಡಿದರು. ಅದರಲ್ಲೂ ಸಲ್ಮಾನ್ ಸತತ 2 ಓವರ್‌ಗಳಲ್ಲಿ ಅಂದರೆ 12 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು.
ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡ ಕಳಪೆ ಬ್ಯಾಟಿಂಗ್ ಮಾಡಿತು. ಇದರ ಪರಿಣಾಮವಾಗಿ 18 ನೇ ಓವರ್‌ನ ವೇಳೆಗೆ ತಂಡವು 6 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 115 ರನ್‌ಗಳನ್ನು ಗಳಿಸಿತ್ತು. ಆದರೆ ಕೊನೆಯ 2 ಓವರ್‌ಗಳು ಪೂರ್ಣಗೊಂಡು ಇನ್ನಿಂಗ್ಸ್ ಕೊನೆಗೊಂಡಾಗ, ಕ್ಯಾಲಿಕಟ್ ಸ್ಕೋರ್ 6 ವಿಕೆಟ್‌ಗಳಿಗೆ 186 ರನ್‌ಗಳಾಗಿತ್ತು. ಅಂದರೆ, ತಂಡವು ಕೊನೆಯ 2 ಓವರ್‌ಗಳಲ್ಲಿ ಬರೋಬ್ಬರಿ 71 ರನ್‌ಗಳನ್ನು ಗಳಿಸಿತ್ತು.
19ನೇ ಓವರ್ ಆರಂಭಕ್ಕೂ ಮುನ್ನ ಸಲ್ಮಾನ್ 13 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದರು. ಆದರೆ 19ನೇ ಓವರ್ನಲ್ಲಿ ಸಿಕ್ಸರ್ಗಳ ಮಳೆಗರೆದ ಸಲ್ಮಾನ್ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಅವರು 20ನೇ ಓವರ್ನಲ್ಲೂ ಈ ಆರ್ಭಟವನ್ನು ಮುಂದುವರೆಸಿದರು. 20ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ಸಲ್ಮಾನ್, ಉಳಿದ ಐದೂ ಎಸೆತಗಳನ್ನು ಸಹ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್ನಲ್ಲಿ ಬರೋಬ್ಬರಿ 40 ರನ್ಗಳು ದಾಖಲಾದವು.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

