ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಉಪ್ಪಿನ ಋಣ ತೀರಿಸಬೇಕು ಎಂಬ ಮಾತು ಯಾಕೆ ಬಂತು? ಇದರ ಹಿಂದಿನ ಅಧ್ಯಾತ್ಮಿಕ ಮಹತ್ವ ಏನು? ಉಪ್ಪಿಗೆ ಯಾಕೆ ನಮ್ಮ ಸಂಸ್ಕೃತಿಯಲ್ಲಿ ಇಷ್ಟೊಂದು ಮಹತ್ವ ನೀಡಲಾಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಇಂದಿನ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉಪ್ಪಿನ ಋಣ, ನಮ್ಮ ಸಂಸ್ಕೃತಿಯಲ್ಲಿ ಉಪ್ಪಿನ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಣೆ ನೀಡಿದ್ದಾರೆ. ನಮ್ಮ ಮನೆಗಳಲ್ಲಿ, ನಮ್ಮ ಜೀವನದಲ್ಲಿ, ನಿತ್ಯ ಜೀವನದಲ್ಲಿ ಅದೆಷ್ಟೋ ಬಾರಿ ಉಪ್ಪಿನ ಋಣ ತೀರಿಸಬೇಕು ಎಂಬ ಮಾತು ಆಡುವುದನ್ನು ಕೇಳಿರುತ್ತೇವೆ. ನಾವು ಯಾರಿಗಾದರೂ ಕೃತಜ್ಞತೆಯನ್ನು ತೋರಿಸತಕ್ಕಂತ ಸಂದರ್ಭದಲ್ಲಿ, ‘‘ಸರ್ ನಿಮ್ಮ ಉಪ್ಪಿನ ಋಣ ತೀರಿಸಬೇಕು. ತಾಯಿ ನೀವು ಕೊಟ್ಟಿರುವ ಊಟ ಆಹಾರ ಆ ಉಪ್ಪಿನ ಋಣ ತೀರಿಸಬೇಕು’’ ಎನ್ನುತ್ತೇವೆ.
ಏನು ಈ ಉಪ್ಪು? ಉಪ್ಪಿಗೆ ಏನು ಮಹತ್ವ? ಉಪ್ಪು ಐಶ್ವರ್ಯ ವರ್ಧಕ ಅಂತ ಕೂಡ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಐಶ್ವರ್ಯವನ್ನು ಕೊಡತಕ್ಕಂತಹದ್ದು ಉಪ್ಪು. ನಾವಂತೂ ಕೆಲವರಿಗೆ ಹೇಳುತ್ತಾ ಇರುತ್ತೇವೆ, ‘‘ನೀವು ಮನೆಗೆ ಬರತಕ್ಕಂತಹ ಸಂದರ್ಭದಲ್ಲಿ ಒಂದು ಹಿಡಿ ಉಪ್ಪು ತಗೊಂಡು ಬನ್ನಿ ಸಾರ್’’ ಎಂದು. ಅಂದರೆ ಆ ಉಪ್ಪು ಐಶ್ವರ್ಯ ವರ್ಧಕ ಎಂಬ ಭಾವನೆಯೂ ಇದೆ. ಅದು ಹೇಗೆ ಐಶ್ವರ್ಯ ವರ್ಧಕ? ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.