ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?

Updated on: Jun 23, 2025 | 6:48 AM

ಡಾ. ಬಸವರಾಜ ಗುರುಜಿಯವರ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡುವುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಗೃಹವಾಸ್ತು ಪ್ರಕಾರ, ಪಶ್ಚಿಮಾಭಿಮುಖ ದೇವರ ಮನೆ ಅಥವಾ ವಿಗ್ರಹಗಳನ್ನು ಇಡುವುದು ಶುಭಕರ ಎಂದು ಹೇಳಲಾಗುತ್ತದೆ. ಆದಾಗ್ಯೂ, ಮೂರುವರೆ ಅಂಗುಲಕ್ಕಿಂತ ದೊಡ್ಡ ವಿಗ್ರಹಗಳನ್ನು ಇಡಬಾರದು ಎಂದು ತಿಳಿಸಲಾಗಿದೆ.

ಬೆಂಗಳೂರು, ಜೂನ್​ 23: ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದೇ ಎಂಬ ಪ್ರಶ್ನೆಗೆ ವಿಡಿಯೋದಲ್ಲಿ ಡಾ. ಬಸವರಾಜ ಗುರೂಜಿಯವರು ಉತ್ತರಿಸಿದ್ದಾರೆ. ಸಾಮಾನ್ಯವಾಗಿ ದೇವರ ಮನೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿರುತ್ತದೆ. ಆದರೆ, ಪಶ್ಚಿಮಾಭಿಮುಖವಾಗಿಯೂ ಇರಬಹುದು. ಶೈವಾಗಮ ಮತ್ತು ವೈಷ್ಣವಾಗಮಗಳಲ್ಲಿ ದೇವಸ್ಥಾನಗಳ ನಿರ್ಮಾಣ ಮತ್ತು ದೇವತಾ ಪ್ರತಿಷ್ಠಾಪನೆಗೆ ವಿಭಿನ್ನ ವಿಧಿವಿಧಾನಗಳಿವೆ. ಆದರೆ ಮನೆಯಲ್ಲಿ, ಗೃಹವಾಸ್ತು ಪದ್ಧತಿಯನ್ನು ಅನುಸರಿಸಿ, ಮೂರುವರೆ ಅಂಗುಲಕ್ಕಿಂತ ಚಿಕ್ಕ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿಯೂ ಇಡಬಹುದಾಗಿದೆ.

 

Published on: Jun 23, 2025 06:47 AM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More