ಮಾನವ ಆಶಾ ಜೀವಿ. ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಆಸೆಯ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ ಹೊರತು ಚಿಕ್ಕದಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಭೂಮಿ ಅಥವಾ ಜಮೀನು ಖರೀದಿಸಬೇಕು ಎಂಬ ಆಸೆ ಇರುತ್ತದೆ. ಈ ಭೂಮಿಯಲ್ಲಿ ಸುಂದರವಾದ ಮನೆ ಕಟ್ಟಿಸಬೇಕು, ನಮ್ಮ ಸಂಸಾರ ಈ ಮನೆಯಲ್ಲಿ ಆನಂದ ಸಾಗರದಲ್ಲಿ ತೇಲಾಡಬೇಕು ಎಂದು ಕನಸು ಕಂಡಿರುತ್ತಾರೆ. ಯಾವುದೇ ಕಾರ್ಯ ಮಾಡಬೇಕಾದರು ಯೋಗ ಬಹಳ ಮುಖ್ಯ. ಯೋಗ ಇದ್ದರೆ ಮಾತ್ರ ನಮ್ಮ ಕನಸು ನೆರವೇರುತ್ತದೆ ಎಂದು ಹೇಳುತ್ತಾರೆ. ನಮ್ಮ ಹಣೆಯಲ್ಲಿ ಬರೆದಿದ್ದರೆ ಅದು ನಮಗೆ ದಕ್ಕೇ ದಕ್ಕುತ್ತದೆ ಎಂದು ಅನೇಕರು ಹೇಳುವುದನ್ನು ಕೇಳಿದ್ದೀರಿ. ಹಾಗೆ ಭೂಮಿ ಖರೀದಿಸಲು ಮತ್ತು ಮನೆ ಕಟ್ಟಿಸಲು ಯೋಗ ಇರಬೇಕು. ಯೋಗ ಇದ್ದರೆ ಮಾತ್ರ ಭೂಮಿ ಖರೀದಿಸಲು ಮತ್ತು ಮನೆ ಕಟ್ಟಿಸಲು ಸಾಧ್ಯವಾಗುತ್ತದೆ. ಈ ಯೋಗ ಹೇಗೆ ಬರುತ್ತದೆ? ಯೋಗಕ್ಕೆ ಅಡ್ಡಿಯಾಗುವ ವಿಷಯಗಳು ಯಾವವು? ಇವುಗಳನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 7:05 am, Mon, 19 August 24