Loading video

Daily Devotional: 7 ಸಂಖ್ಯೆಯ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ ತಿಳಿಯಿರಿ

Updated on: Jun 15, 2025 | 6:51 AM

ಡಾ. ಬಸವರಾಜ್ ಗುರೂಜಿ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಏಳರ ಸಂಖ್ಯೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಸಂಖ್ಯಾಶಾಸ್ತ್ರದ ದೃಷ್ಟಿಕೋನದಿಂದ ಅಲ್ಲದೆ, ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಏಳರ ಸಂಖ್ಯೆಯು ಹೊಂದಿರುವ ವಿಶೇಷ ಸ್ಥಾನವನ್ನು ವಿವರಿಸುತ್ತದೆ. ಸಪ್ತ ಋಷಿಗಳು, ಸಪ್ತ ನದಿಗಳು ಮುಂತಾದ ಉದಾಹರಣೆಗಳ ಮೂಲಕ ಏಳರ ಸಂಖ್ಯೆಯ ಮಹತ್ವವನ್ನು ತಿಳಿಸಲಾಗಿದೆ.

ಬೆಂಗಳೂರು, ಜೂನ್​ 15: ಡಾ. ಬಸವರಾಜ್ ಗುರೂಜಿ ಇಂದಿನ ದೈನಂದಿನ ಭಕ್ತಿಯಲ್ಲಿ ಏಳರ ಸಂಖ್ಯೆಯ ಮಹತ್ವವನ್ನು ವಿವರಿಸಿದ್ದಾರೆ. ಕನ್ನಡ ಸಂಸ್ಕೃತಿಯಲ್ಲಿ ಏಳನ್ನು ಹೆಚ್ಚಾಗಿ ಶುಭ ಸಂಖ್ಯೆಯಾಗಿ ಪರಿಗಣಿಸಲಾಗುತ್ತದೆ. ಸಪ್ತ ಋಷಿಗಳು, ಸಪ್ತ ಸಮುದ್ರಗಳು, ಸಪ್ತ ನದಿಗಳು ಮುಂತಾದ ಉಲ್ಲೇಖಗಳ ಮೂಲಕ ಏಳರ ಸಂಖ್ಯೆಯ ಅರ್ಥ ಮತ್ತು ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು. ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿ ಏಳನೇ ಬಾಗಿಲಿನಲ್ಲಿ ವೆಂಕಟೇಶ್ವರನನ್ನು ಕಾಣಬಹುದು. ಕೆಲವರು ಏಳನ್ನು ಅಶುಭ ಸಂಖ್ಯೆಯೆಂದು ಪರಿಗಣಿಸುವುದು ಸಹ ಸಾಮಾನ್ಯ.