Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ

Updated on: May 09, 2025 | 6:58 AM

ಜಾತಕದ ನಾಲ್ಕನೇ ಮನೆ, ಶುಕ್ರ, ಕುಜ, ಮತ್ತು ಶನಿಯ ಸ್ಥಾನಗಳ ಪ್ರಭಾವವನ್ನು ವಿಶ್ಲೇಷಿಸುವ ಮೂಲಕ ಮನೆ ಕಟ್ಟುವ ಅಥವಾ ಖರೀದಿಸುವ ಯೋಗವನ್ನು ತಿಳಿದುಕೊಳ್ಳಬಹುದು. ಪೂರ್ವಿಕರ ಆಸ್ತಿ ಮತ್ತು ಧೈರ್ಯದ ಪ್ರಾಮುಖ್ಯತೆಗೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯಾವೆಲ್ಲಾ ಮನೆ ಖರೀದಿಗೆ ಸೂಕ್ತ ಸಮಯ ಎಂಬುವುದನ್ನು ಗುರೂಜಿ ವಿವರಿಸಿದ್ದಾರೆ.

ಬೆಂಗಳೂರು, ಮೇ 09: ಇಂದಿನ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಮನೆ ಖರೀದಿ ಯೋಗದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ನಾಲ್ಕನೇ ಮನೆ (ಸುಖ ಸ್ಥಾನ) ಮನೆ ಖರೀದಿಗೆ ಮುಖ್ಯವಾಗಿದೆ. ಈ ಮನೆಯ ಅಧಿಪತಿಯ ಸ್ಥಾನ ಮತ್ತು ಗ್ರಹಗಳ ದೃಷ್ಟಿ ಮನೆ ಯೋಗವನ್ನು ನಿರ್ಧರಿಸುತ್ತದೆ. ಶುಕ್ರ ನೀಚನಾಗಿದ್ದರೆ ಮನೆ ಖರೀದಿ ಕಷ್ಟವಾಗಬಹುದು. ಕುಜ ನೀಚ ಮತ್ತು ಶುಕ್ರ ಉಚ್ಚವಾಗಿದ್ದರೆ ಫ್ಲ್ಯಾಟ್ ಖರೀದಿಗೆ ಅವಕಾಶವಿರಬಹುದು. ವಿಡಿಯೋ ನೋಡಿ.