Daily Devotional: ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ

Updated on: Feb 01, 2026 | 7:17 AM

ವ್ರತಾಚರಣೆಯ ಭಾಗವಾಗಿ ಉಪವಾಸ, ವಿಷ್ಣು, ಲಕ್ಷ್ಮಿ, ಕುಲದೇವರ ಪೂಜೆಗಳನ್ನು ಮಾಡಲಾಗುತ್ತದೆ. ಕೆಲವರು ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಆಚರಿಸುತ್ತಾರೆ. ನದಿ ಅಥವಾ ಗಂಗಾ ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಮನೆಯಲ್ಲಿ ಸ್ನಾನ ಮಾಡುವಾಗಲೂ "ಹರ ಹರ ಗಂಗೆ" ಎಂದು ಮೂರು ಬಾರಿ ಹೇಳಿ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು. ಸಂಜೆ ಚಂದ್ರೋದಯದ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ತಾಯಿಯ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಾಡುವ ದಾನವು ಅಕ್ಷಯ ದಾನವಾಗಿ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಫೆಬ್ರುವರಿ​ 01: ಮಾಘ ಮಾಸದ ಹುಣ್ಣಿಮೆ ದಿನವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಶಸ್ತ್ಯವನ್ನು ಹೊಂದಿದೆ. ಇಂದಿಗೆ ಮಾಘ ಸ್ನಾನವು ಸಮಾಪ್ತಿಗೊಳ್ಳುತ್ತದೆ. ಮಾಗ ಎಂದರೆ ಕನ್ನಡದಲ್ಲಿ ಮಾಗಿರುವುದು ಅಥವಾ ಪರಿಪೂರ್ಣವಾಗಿರುವುದು ಎಂಬ ಅರ್ಥವಿದೆ.

ಈ ದಿನ ಜಪ, ಪೂಜೆ, ಧ್ಯಾನ ಮತ್ತು ದಾನ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಾಘ ಹುಣ್ಣಿಮೆಯಂದು ಸಕಲ ದೇವತೆಗಳು ಭೂಮಿಗೆ ಆಗಮಿಸುತ್ತಾರೆ ಎಂಬ ನಂಬಿಕೆ ಇದೆ. ಇದರಿಂದಾಗಿ ಈ ದಿನದಂದು ಮಾಡುವ ಆಚರಣೆಗಳಿಂದ ನವಗ್ರಹ ದೋಷ, ಶನಿ ದೋಷ, ಅಕಾಲ ಮರಣ ಮತ್ತು ಅಪವಾದಗಳಂತಹ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಬಹುದು ಎಂದು ಹೇಳಲಾಗುತ್ತದೆ.

ವ್ರತಾಚರಣೆಯ ಭಾಗವಾಗಿ ಉಪವಾಸ, ವಿಷ್ಣು, ಲಕ್ಷ್ಮಿ, ಕುಲದೇವರ ಪೂಜೆಗಳನ್ನು ಮಾಡಲಾಗುತ್ತದೆ. ಕೆಲವರು ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಆಚರಿಸುತ್ತಾರೆ. ನದಿ ಅಥವಾ ಗಂಗಾ ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಮನೆಯಲ್ಲಿ ಸ್ನಾನ ಮಾಡುವಾಗಲೂ “ಹರ ಹರ ಗಂಗೆ” ಎಂದು ಮೂರು ಬಾರಿ ಹೇಳಿ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು. ಸಂಜೆ ಚಂದ್ರೋದಯದ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ತಾಯಿಯ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಾಡುವ ದಾನವು ಅಕ್ಷಯ ದಾನವಾಗಿ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More