Daily Devotional: ರಕ್ಷಾ ಬಂಧನ ಆಚರಣೆ ಹಿಂದಿನ ಮಹತ್ವ ತಿಳಿಯಿರಿ

Updated on: Aug 09, 2025 | 7:01 AM

ರಕ್ಷಾ ಬಂಧನವು ಕೇವಲ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಕಟ್ಟಿ ಅವರ ಆರೋಗ್ಯ ಮತ್ತು ಸುಖಕ್ಕಾಗಿ ಪ್ರಾರ್ಥಿಸುತ್ತಾರೆ. ಪುರಾಣಗಳಲ್ಲಿಯೂ ರಕ್ಷಾಬಂಧನದ ಉಲ್ಲೇಖಗಳಿವೆ. ಪಾರ್ವತಿ ದೇವಿ ದೇವೇಂದ್ರನಿಗೆ ರಕ್ಷೆಯನ್ನು ಕಟ್ಟಿದ್ದು, ದ್ರೌಪದಿ ಶ್ರೀಕೃಷ್ಣನಿಗೆ ಕಟ್ಟಿದ್ದು ಇದಕ್ಕೆ ಕೆಲವು ಉದಾಹರಣೆಗಳು.

ಬೆಂಗಳೂರು, ಆಗಸ್ಟ್​​ 09: ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಪವಿತ್ರ ಹಬ್ಬ. “ರಕ್ಷ” ಎಂದರೆ ರಕ್ಷಣೆ ಮತ್ತು “ಬಂಧನ” ಎಂದರೆ ಬಂಧ. ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಕಟ್ಟುವುದು ಇದರ ಮುಖ್ಯ ಆಚರಣೆ. ಪ್ರತಿಯಾಗಿ ಸಹೋದರರು ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇದು ಕೇವಲ ರಕ್ತಸಂಬಂಧಿಗಳಿಗೆ ಮಾತ್ರ ಸೀಮಿತವಲ್ಲ. ಪ್ರೀತಿ ಮತ್ತು ಗೌರವ ಇರುವ ಎಲ್ಲರಿಗೂ ರಕ್ಷಾ ಕಟ್ಟಬಹುದು. ಪುರಾಣಗಳಲ್ಲಿ ದೇವತೆಗಳು ಮತ್ತು ರಾಜರಿಗೆ ರಕ್ಷಾ ಕಟ್ಟಿದ ಉಲ್ಲೇಖಗಳಿವೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More