Loading video

Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ ತಿಳಿಯಿರಿ

|

Updated on: Apr 04, 2025 | 7:05 AM

ಮನೆಯಲ್ಲಿ ಮಣ್ಣಿನ ಮಡಕೆಯನ್ನು ಇಟ್ಟುಕೊಳ್ಳುವುದರಿಂದ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಕುಜ ದೋಷ ನಿವಾರಣೆಯಾಗುತ್ತದೆ ಮತ್ತು ಕುಟುಂಬದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಮಡಕೆಯ ನೀರನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಮಡಕೆ ದಾನ ಮಾಡುವುದು ಶುಭ ಫಲಗಳನ್ನು ನೀಡುತ್ತದೆ. ಮಡಕೆಯು ಭೂಮಿಯನ್ನು ಪ್ರತಿನಿಧಿಸುತ್ತದೆ.

ಬೆಂಗಳೂರು, ಏಪ್ರಿಲ್ 04: ಮನೆಯಲ್ಲಿ ಮಣ್ಣಿನ ಮಡಕೆ ಇಟ್ಟುಕೊಳ್ಳುವುದರಿಂದ ಅನೇಕ ಲಾಭಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಡಕೆಯು ಭೂಮಿಯನ್ನು ಪ್ರತಿನಿಧಿಸುತ್ತದೆ. ಮಡಕೆಯ ನೀರು ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಮನೆಯ ಈಶಾನ್ಯ ಮೂಲೆಯಲ್ಲಿ ಮಡಕೆಯನ್ನು ಇಡುವುದರಿಂದ ವಾದ-ವಿವಾದಗಳು ಕಡಿಮೆಯಾಗುತ್ತದೆ. ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಕುಜ ದೋಷ ಇರುವವರಿಗೆ ಮಡಕೆಯು ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ. ಇದೆಲ್ಲ ಅನುಭವ ಆಧಾರಿತ ಮಾಹಿತಿಯಾಗಿದ್ದು, ವೈಜ್ಞಾನಿಕ ಪುರಾವೆಗಳಿಲ್ಲ.

ಮತ್ತಷ್ಟು ಅಧ್ಯಾತ್ಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.