Daily Devotional: ವಾರಕ್ಕೆ ಒಂದು ಸಲವಾದ್ರೂ ಮಕ್ಕಳಿಗೆ ಅಭ್ಯಂಗನ ಸ್ನಾನ ಮಾಡಿಸಬೇಕು ಯಾಕೆ?

Updated on: Jan 11, 2026 | 6:52 AM

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅರಳೆಣ್ಣೆ (ಕ್ಯಾಸ್ಟರ್ ಆಯಿಲ್) ಮಹತ್ವಪೂರ್ಣ ಸ್ಥಾನ ಪಡೆದುಕೊಂಡಿದೆ. ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಇದು ಅನೇಕ ಶುಭ ಫಲಗಳನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ ಇದನ್ನು ಪಾಲಿಸುವುದು ಪ್ರಯೋಜನಕಾರಿ.

ಬೆಂಗಳೂರು, ಜನವರಿ 11: ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಅರಳೆಣ್ಣೆ (ಕ್ಯಾಸ್ಟರ್ ಆಯಿಲ್) ಮಹತ್ವಪೂರ್ಣ ಸ್ಥಾನ ಪಡೆದುಕೊಂಡಿದೆ. ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಇದು ಅನೇಕ ಶುಭ ಫಲಗಳನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಅರಳೆಣ್ಣೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ ಇದನ್ನು ಪಾಲಿಸುವುದು ಪ್ರಯೋಜನಕಾರಿ.

ಅರಳೆಣ್ಣೆಯನ್ನು ತಲೆಗೆ, ಹೊಕ್ಕಳಿಗೆ, ಪಾದಗಳಿಗೆ ಮತ್ತು ಅಂಗೈಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಸಿಲಿನಲ್ಲಿ ಓಡಾಡಲು ಬಿಡುವುದರಿಂದ ದೇಹದ ಉಷ್ಣಾಂಶ ಸಮತೋಲನಗೊಳ್ಳುತ್ತದೆ. ಇದು ಆರೋಗ್ಯ ಸಮಸ್ಯೆಗಳು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಜ್ಯೋತಿಷ್ಯ ಪ್ರಕಾರ, ಈ ಅಭ್ಯಾಸವು ಕರ್ಮಫಲಗಳನ್ನು ಕಡಿಮೆ ಮಾಡಿ, ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ ಮತ್ತು ಗ್ರಹದೋಷಗಳನ್ನು ನಿವಾರಿಸುತ್ತದೆ. ಈ ಸಾಂಪ್ರದಾಯಿಕ ವಿಧಾನವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ. ನಂತರ ಮಂದ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುವುದು ಉತ್ತಮ. ದೊಡ್ಡವರೂ ಕೂಡ ಇದನ್ನು ಪಾಲಿಸಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.