Daily Devotional: ಮನೆಯಲ್ಲಿ ಜೋಡಿ ಹಂಸಗಳ ಫೋಟೋ ಇದ್ರೆ ಶುಭವಾಗುತ್ತೆ!
ವಾಸ್ತು ಶಾಸ್ತ್ರದ ಪ್ರಕಾರ, ಜೋಡಿ ಹಂಸಗಳ ಚಿತ್ರವನ್ನು ಮನೆಯ ಹಾಲ್‌ನಲ್ಲಿ, ಅಂದರೆ ಜನರು ಹೆಚ್ಚು ಓಡಾಡುವ ಜಾಗದಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಇಡುವುದು ಶುಭಕರ. ಇದು ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲು, ಮನೆಯಲ್ಲಿನ ಕಲಹಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಲಾಭವನ್ನು ತರಲು ಸಹಾಯ ಮಾಡುತ್ತದೆ. ಮಕ್ಕಳು ಓದುವ ಜಾಗದಲ್ಲಿ ಈ ಚಿತ್ರವನ್ನು ಇಡುವುದರಿಂದ ಅವರ ಮನಸ್ಸು ಸ್ಥಿರವಾಗಿ, ಏಕಾಗ್ರತೆ ಹೆಚ್ಚಿ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ, ಮನೆಯ ಯಜಮಾನನಿಗೆ ಉದ್ಯೋಗದಲ್ಲಿ ನೆಮ್ಮದಿ ಹಾಗೂ ಗೃಹಿಣಿಗೆ ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಈ ನಂಬಿಕೆಗಳು ಮಾನಸಿಕ ಶಾಂತಿ ಮತ್ತು ಧೈರ್ಯವನ್ನು ನೀಡುತ್ತವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಜನವರಿ 19: ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಒಂದು ವಿಶೇಷ ವಿಧಾನವೆಂದರೆ ಜೋಡಿ ಹಂಸಗಳ ಚಿತ್ರವನ್ನು ಮನೆಯಲ್ಲಿ ಇಡುವುದು. ಹಂಸಗಳನ್ನು ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಧನಾತ್ಮಕ ಶಕ್ತಿಯ ಸಂಕೇತವಾಗಿವೆ.