Daily Devotional: ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?

Updated on: Mar 21, 2026 | 6:48 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಭಕ್ತಿಭಾವದಿಂದ ಭಗವಂತನನ್ನು ಆರಾಧಿಸುವ ಒಂದು ಮಹತ್ವದ ವಿಧಾನವಾಗಿದೆ. ದುರ್ಗಾ ಎಂದರೆ ದುರ್ಗತಿನಾಶಿನಿ. ಅಂದರೆ ನಮ್ಮ ಎಲ್ಲಾ ದುರ್ಗತಿಗಳನ್ನು ನಾಶ ಮಾಡುವ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ - ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳಾಗಿವೆ.

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಭಕ್ತಿಭಾವದಿಂದ ಭಗವಂತನನ್ನು ಆರಾಧಿಸುವ ಒಂದು ಮಹತ್ವದ ವಿಧಾನವಾಗಿದೆ. ದುರ್ಗಾ ಎಂದರೆ ದುರ್ಗತಿನಾಶಿನಿ. ಅಂದರೆ ನಮ್ಮ ಎಲ್ಲಾ ದುರ್ಗತಿಗಳನ್ನು ನಾಶ ಮಾಡುವ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ – ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳಾಗಿವೆ.

ಹನುಮಂತ ಮತ್ತು ಮಹಾಲಕ್ಷ್ಮಿಗೆ ವೀಳ್ಯದೆಲೆ ಹಾರ ಅರ್ಪಿಸುವ ಪದ್ಧತಿ ಇರುವಂತೆ, ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ನಮ್ಮ ಸಂಕಲ್ಪಗಳನ್ನು ಈಡೇರಿಸಲು, ಭಯ, ಆತಂಕ, ಒಂಟಿತನ, ಬುದ್ಧಿ ಮಂಕುತನ, ಆರೋಗ್ಯ ಸಮಸ್ಯೆಗಳು, ಹಾಗೂ ರಾಜಕೀಯ ಮತ್ತು ವೃತ್ತಿಪರ ಅವಮಾನಗಳಂತಹ ಕಷ್ಟಗಳನ್ನು ದೂರ ಮಾಡುತ್ತದೆ. ಈ ಆಚರಣೆಯನ್ನು ಒಂಬತ್ತು ಮಂಗಳವಾರಗಳಂದು ಸಂಧ್ಯಾಕಾಲದಲ್ಲಿ, 45 ಎಲೆಗಳ ವೀಳ್ಯದೆಲೆ ಹಾರ ಮತ್ತು ಬೆಲ್ಲದ ಪಾಯಸವನ್ನು ದೇವಿಗೆ ಅರ್ಪಿಸಿ, “ಓಂ ದುಂ ದುರ್ಗಾಯೈ ನಮಃ” ಮಂತ್ರ ಜಪಿಸುವ ಮೂಲಕ ಮಾಡಲಾಗುತ್ತದೆ. ಕೊನೆಯ ಮಂಗಳವಾರ ಮೂವರು ಮುತ್ತೈದೆಯರಿಗೆ ತಾಂಬೂಲವನ್ನು ನೀಡುವುದು ಈ ವಿಧಾನದ ಸಂಪೂರ್ಣತೆಯನ್ನು ಸೂಚಿಸುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Follow Us