Daily Devotional: ಸಾಮಾನ್ಯ ಜನ ಗರ್ಭಗುಡಿ ಪ್ರವೇಶಿಸಿದರೆ ಏನಾಗುತ್ತೆ?

Updated on: Dec 29, 2025 | 7:15 AM

ದೇವಾಲಯವು ದೈವಿಕ ಶಕ್ತಿಯ ಆಧಾರ ಕೇಂದ್ರವಾಗಿದೆ. ಭಕ್ತರು ತಮ್ಮ ಆಶಯಗಳು, ದೋಷಗಳು ಮತ್ತು ಕರ್ಮಫಲಗಳನ್ನು ಭಗವಂತನಿಗೆ ನಿವೇದಿಸಿಕೊಳ್ಳುವ ಪವಿತ್ರ ಸ್ಥಳವಾಗಿದೆ. ಸಾಮಾನ್ಯ ಜನರು ಗರ್ಭಗುಡಿಯನ್ನು ಪ್ರವೇಶಿಸಬಹುದೇ? ಅದು ಶುಭಕರವೇ ಅಥವಾ ಅಶುಭಕರವೇ? ಎಂಬುದು ಅನೇಕರಿಗೆ ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಶ್ರೀಮಂತರು, ಅಧಿಕಾರದಲ್ಲಿರುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಜ್ಞಾನಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಧಾರ್ಮಿಕ ನಿಯಮಗಳ ಪ್ರಕಾರ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಸ್ಪರ್ಶಿಸುವ ಹಕ್ಕು ಎಲ್ಲರಿಗೂ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಇದಕ್ಕೆ ಅಪವಾದವಾಗಿದ್ದು, ಅಲ್ಲಿ ಭಕ್ತರಿಗೆ ದೈವವನ್ನು ಸ್ಪರ್ಶಿಸಿ ಅಭಿಷೇಕ ಮಾಡಲು ಪ್ರಾಚೀನ ಕಾಲದಿಂದಲೂ ಅನುಮತಿ ಇದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಡಿಸೆಂಬರ್ 29: ದೇವಾಲಯವು ದೈವಿಕ ಶಕ್ತಿಯ ಆಧಾರ ಕೇಂದ್ರವಾಗಿದೆ. ಭಕ್ತರು ತಮ್ಮ ಆಶಯಗಳು, ದೋಷಗಳು ಮತ್ತು ಕರ್ಮಫಲಗಳನ್ನು ಭಗವಂತನಿಗೆ ನಿವೇದಿಸಿಕೊಳ್ಳುವ ಪವಿತ್ರ ಸ್ಥಳವಾಗಿದೆ. ಸಾಮಾನ್ಯ ಜನರು ಗರ್ಭಗುಡಿಯನ್ನು ಪ್ರವೇಶಿಸಬಹುದೇ? ಅದು ಶುಭಕರವೇ ಅಥವಾ ಅಶುಭಕರವೇ? ಎಂಬುದು ಅನೇಕರಿಗೆ ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಶ್ರೀಮಂತರು, ಅಧಿಕಾರದಲ್ಲಿರುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಮತ್ತು ಜ್ಞಾನಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಧಾರ್ಮಿಕ ನಿಯಮಗಳ ಪ್ರಕಾರ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಸ್ಪರ್ಶಿಸುವ ಹಕ್ಕು ಎಲ್ಲರಿಗೂ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಇದಕ್ಕೆ ಅಪವಾದವಾಗಿದ್ದು, ಅಲ್ಲಿ ಭಕ್ತರಿಗೆ ದೈವವನ್ನು ಸ್ಪರ್ಶಿಸಿ ಅಭಿಷೇಕ ಮಾಡಲು ಪ್ರಾಚೀನ ಕಾಲದಿಂದಲೂ ಅನುಮತಿ ಇದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.