Daily Devotional: ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಸಲಹೆ

Edited By:

Updated on: Dec 12, 2024 | 6:49 AM

ಪೂರ್ವಾಭಿಮುಖವಾಗಿ ನಿಲ್ಲಿಸಿಯೇ ವಾಹನ ಖರೀದಿಸಬೇಕು ಯಾಕೆ? ವಾಹನ ಖರೀದಿಸುವಾಗ ಏನು ಮಾಡಬೇಕು? ವಾಹನ ತಗೊಂಡ ತಕ್ಷಣ ಯಾವ ಪೂಜೆ ಮಾಡಿಸಬೇಕು? ಜ್ಯೋತಿಷ್ಯ ಶಾಸ್ತ್ರ ನಂಬುವವರ ಮನಸಿನಲ್ಲಿ ಇತ್ಯಾದಿ ಪ್ರಶ್ನೆಗಳು ಸಹಜ. ಇದಕ್ಕೆ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರಿಸಿದ್ದಾರೆ. ಏನು ಮಾಡಬೇಕೆಂಬ ವಿವರ ಇಲ್ಲಿದೆ.

ವಾಹನ ಎಂಬುದು ಇಂದು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಪ್ರಾಮುಖ್ಯ ಪಡೆದ ವಿಷಯವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಹನಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಾಹನ ಕೊಂಡುಕೊಳ್ಳುವುದನ್ನು ಅವರವರ ಜಾತಕದ ಚತುರ್ಥ ಸ್ಥಾನದ ಫಲದಿಂದ ನಾವು ನಿರ್ಣಯ ಕೈಗೊಳ್ಳುತ್ತೇವೆ. ಹೊಸ ವಾಹನ ಖರೀದಿ ಯಾವ ದಿನ, ಹೇಗೆ ಮಾಡಬೇಕು? ವಾಹನದ ನಿರ್ವಹಣೆ ಹೇಗೆ ಮಾಡಬೇಕು? ಹೇಗೆ ಖರೀದಿಸಿ ಹೇಗೆ ನಿರ್ವಹಣೆ ಮಾಡಿದರೆ ವಾಹನ ಸುದೀರ್ಘ ಸಮಯ ನಮ್ಮ ಜತೆ ಚೆನ್ನಾಗಿರುತ್ತದೆ ಮತ್ತು ಸುರಕ್ಷಿತವಾದ ಪ್ರಯಾಣ ಇರುತ್ತದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ.

Published on: Dec 12, 2024 06:48 AM