Daily Devotional: ನಿಧಿ ಯೋಗ ಯಾರಿಗಿದೆ, ನಿಜಕ್ಕೂ ಸಿಗುತ್ತಾ?

Updated on: May 11, 2025 | 7:12 AM

ಡಾ. ಬಸವರಾಜ ಗುರುಜಿ ಅವರು ನಿಧಿ ಯೋಗದ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಜಾತಕದಲ್ಲಿ ದ್ವಿತೀಯ ಸ್ಥಾನದ ಬಲ, ಶುಭ ಗ್ರಹಗಳ ಸ್ಥಾನ ಮತ್ತು ವೀಕ್ಷಣೆ ಇದ್ದಾಗ ಮಾತ್ರ ನಿಧಿ ಯೋಗ ಲಭ್ಯವಾಗುತ್ತದೆ. ಭೂಮಿಯಲ್ಲಿ ಸದ್ದು ಕೇಳಿಸುತ್ತದೆ ಅಥವಾ ಮನೆಯಲ್ಲಿ ನಿಧಿ ಇದೆ ಎಂಬುವುದು ಸುಳ್ಳು ನಂಬಿಕೆಗಳೆಂದು ಪರಿಗಣಿಸಲಾಗಿದೆ.

ಬೆಂಗಳೂರು, ಮೇ 11: ನಿಧಿ ಯೋಗದ ಬಗ್ಗೆ ಡಾ. ಬಸವರಾಜ ಗುರುಜಿ ಅವರು ತಮ್ಮ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಪುರಾಣಗಳಲ್ಲಿ ಮತ್ತು ಇತಿಹಾಸದಲ್ಲಿ ನಿಧಿಗಳ ಕುರಿತು ಉಲ್ಲೇಖಗಳಿದ್ದರೂ, ನಿಧಿ ಯೋಗ ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಅವಲಂಬಿಸಿದೆ. ದ್ವಿತೀಯ ಸ್ಥಾನ (ಧನ ಸ್ಥಾನ)ದಲ್ಲಿ ಶುಭ ಗ್ರಹಗಳು ಉಚ್ಚ ಸ್ಥಾನದಲ್ಲಿ ಇದ್ದರೆ ಮಾತ್ರ ನಿಧಿ ಯೋಗ ಲಭ್ಯವಾಗುತ್ತದೆ. ನಿಧಿ ಯೋಗ ಇರುವವರಿಗೆ ಒಳ್ಳೆಯ ವರ್ಷ, ಸಂತತಿ ಮತ್ತು ಆಕಸ್ಮಿಕ ಧನಲಾಭಗಳು ಸಿಗುವ ಸಾಧ್ಯತೆ ಇದೆ.