Daily Devotional: ದೇವರು ಯಾರಿಗೆ ಸಹಾಯ ಮಾಡುತ್ತಾನೆ ಗೊತ್ತಾ?

Updated on: Jun 16, 2025 | 6:53 AM

ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ, ಡಾ. ಬಸವರಾಜ್ ಗುರೂಜಿ ದೇವರ ಸಹಾಯ ಯಾರಿಗೆ ಸಿಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಶ್ಲೋಕದ ಪ್ರಕಾರ, ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ ಇರುವವರಿಗೆ ದೇವರ ಅನುಗ್ರಹ ಲಭ್ಯವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ದಾನ ಧರ್ಮಗಳಲ್ಲಿ ತೊಡಗುವವರಿಗೆ ದೇವರು ಸಹಾಯ ಮಾಡುತ್ತಾನೆ.

ಬೆಂಗಳೂರು, ಜೂನ್​ 16: ಡಾ. ಬಸವರಾಜ್ ಗುರೂಜಿ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ, ದೇವರ ಸಹಾಯ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಧರ್ಮಗ್ರಂಥಗಳ ಪ್ರಕಾರ, ದೇವರು ಎಲ್ಲರನ್ನೂ ಸಮಾನವಾಗಿ ನೋಡುತ್ತಾನೆ. ಆದರೆ, ದೇವರ ಅನುಗ್ರಹ ಪಡೆಯಲು ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ ಅವಶ್ಯಕ ಎಂದು ಹೇಳಲಾಗುತ್ತದೆ. ಕಾಯಕಯೋಗಿಗಳಿಗೆ, ಕಷ್ಟಪಟ್ಟು ದುಡಿಯುವವರಿಗೆ, ಮತ್ತು ದಾನ ಧರ್ಮಗಳಲ್ಲಿ ತೊಡಗುವವರಿಗೆ ದೇವರ ಸಹಾಯ ಶಾಶ್ವತವಾಗಿರುತ್ತದೆ. ಕೇವಲ ದೇವರನ್ನು ನಂಬುವುದರಿಂದ ಮಾತ್ರ ಸಾಲದು. ಪ್ರಯತ್ನ ಮತ್ತು ಸಂಕಲ್ಪದೊಂದಿಗೆ ದೇವರನ್ನು ಸ್ಮರಿಸುವುದು ಮುಖ್ಯ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More