Daily Devotional: ಮನೆಯಲ್ಲಿ ವಿಂಡ್ ಬೆಲ್ ಯಾಕೆ ನೇತು ಹಾಕಬೇಕು? ಈ ವಿಡಿಯೋ ನೋಡಿ
ಮನೆಯ ಅಂದ ಚೆಂದಕ್ಕೆಂದು, ಸೌಂದರ್ಯ ಹೆಚ್ಚಿಸಲೆಂದು ಮನೆಯಲ್ಲಿ ವಿಂಡ್ ಬೆಲ್ ನೇತು ಹಾಕುವುದನ್ನು ಈಗೀಗ ಹೆಚ್ಚಾಗಿದೆ. ಇದನ್ನು ವಿಂಡ್‌ಚೈಮ್ ಎಂದು ಕರೆಯುತ್ತಾರೆ. ಇದು ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗುತ್ತದೆ. ಮನೆಯಲ್ಲಿ ವಿಂಡ್ ಬೆಲ್ ಯಾಕೆ ನೇತು ಹಾಕಬೇಕು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..
ಅದೃಷ್ಟ ಮತ್ತು ಅದನ್ನು ಆಹ್ವಾನಿಸುವ ವಿಧಾನಗಳು ಹಲವು. ಅದೃಷ್ಟ ಮನೆಗೆ ಬರುತ್ತೆ ಎಂದರೆ ಯಾರು ತಾನೆ ಬಿಡುತ್ತಾರೆ. ಎರಡೂ ಕೈಗಳಲ್ಲೂ ಕರೆದುಕೊಂಡು ಬರುತ್ತಾರೆ. ಹೀಗಿರುವ ಮನೆಯ ಅಂದ ಚೆಂದಕ್ಕೆಂದು, ಸೌಂದರ್ಯ ಹೆಚ್ಚಿಸಲೆಂದು ಮನೆಯಲ್ಲಿ ವಿಂಡ್ ಬೆಲ್ ನೇತು ಹಾಕುವುದನ್ನು ಈಗೀಗ ಹೆಚ್ಚಾಗಿದೆ. ಇದನ್ನು ವಿಂಡ್‌ಚೈಮ್ ಎಂದು ಕರೆಯುತ್ತಾರೆ. ಇದು ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೆ ವಾಸ್ತುವಿನಲ್ಲೂ ಪ್ರಾಮುಖ್ಯತೆ ಪಡೆದಿದ್ದು ವಾಸ್ತು ದೋಷಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ವಿಂಡ್‌ಬೆಲ್ ಗಾಳಿ ಶಬ್ದ ಮಾಡುವುದರಿಂದ ಆಹ್ಲಾದಕರ ಮತ್ತು ಶಾಂತ ಸಂಗೀತವನ್ನು ನೀಡುತ್ತದೆ. ಅದೃಷ್ಟದ ಈ ಚಿಹ್ನೆಯು ಸಾಮರಸ್ಯವನ್ನು ತರುತ್ತದೆ. ಅದಾಗ್ಯೂ ವಿಂಡ್‌ಚೈಮ್‌ಗಳನ್ನು ಸರಿಯಾದ ದಿಕ್ಕಿನಲ್ಲಿ ನೇತುಹಾಕುವುದು ಅದರಿಂದ ಉತ್ತಮ ಪ್ರಯೋಕನಗಳನ್ನು ಪಡೆಯಲು ಅಷ್ಟೇ ಮುಖ್ಯ.