Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು

Updated on: Jun 18, 2025 | 6:47 AM

ಡಾ. ಬಸವರಾಜ ಗುರೂಜಿ ಅವರು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾರಿಗೂ ಹೇಳಬಾರದ ಐದು ವಿಷಯಗಳ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಅವುಗಳೆಂದರೆ ಆರ್ಥಿಕ ನಷ್ಟ, ಮನಸ್ತಾಪಗಳು, ಮನೆಯಲ್ಲಿನ ದುಶ್ಚರಿತಗಳು, ವಂಚನೆ ಮತ್ತು ಅಪಮಾನಗಳು. ಈ ವಿಷಯಗಳನ್ನು ಗುಪ್ತವಾಗಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ ಮತ್ತು ಶ್ರೇಯಸ್ಸು ಸಾಧಿಸಲು ಸಹಾಯವಾಗಲಿದೆ.

ಬೆಂಗಳೂರು, ಜೂನ್ 18: ಜೀವನದಲ್ಲಿ ಯಶಸ್ಸು ಮತ್ತು ಶಾಂತಿಯನ್ನು ಪಡೆಯಲು ಐದು ವಿಷಯಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಈ ವಿಷಯಗಳನ್ನು ಹಂಚಿಕೊಳ್ಳುವುದರಿಂದ ವ್ಯಕ್ತಿಯ ಖ್ಯಾತಿ ಮತ್ತು ಮಾನಸಿಕ ಶಾಂತಿಗೆ ಹಾನಿಯಾಗಬಹುದು. ಆ ಐದು ವಿಷಯಗಳು ಯಾವವೆಂದರೆ 1) ಆರ್ಥಿಕ ನಷ್ಟ ಅಥವಾ ಹಣಕಾಸಿನ ಸಮಸ್ಯೆಗಳು. 2) ಕುಟುಂಬ ಸದಸ್ಯರೊಂದಿಗಿನ ಮನಸ್ತಾಪಗಳು. 3) ಮನೆಯಲ್ಲಿ ನಡೆದ ಅಹಿತಕರ ಘಟನೆಗಳು. 4) ಇತರರಿಂದ ಆದ ವಂಚನೆಗಳು. 5) ಅನುಭವಿಸಿದ ಅಪಮಾನಗಳು. ಈ ವಿಷಯಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದು ವ್ಯಕ್ತಿಯ ಒಳ್ಳೆಯದಕ್ಕಾಗಿ ಎಂದು ಗುರೂಜಿ ತಿಳಿಸಿದ್ದಾರೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More