Daily Horoscope: ಈ ದಿನ ರವಿ ಮೇಷ ರಾಶಿ, ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ

Updated on: Apr 13, 2025 | 6:57 AM

2025 ಏಪ್ರಿಲ್ 13: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಇಂದಿನ 12 ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ದಿನ ರವಿ ಮೇಷ ರಾಶಿಯಲ್ಲೂ ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಶ್ವಿನಿ ಮಳೆಯ ಆರಂಭವಾಗಲಿದೆ.

ಬೆಂಗಳೂರು, ಏಪ್ರಿಲ್​​ 13: ಈ ದಿನ ಚಿತ್ತ ನಕ್ಷತ್ರ, ಅರ್ಷಣ ಯೋಗ ಮತ್ತು ಬಾಲವಕರಣ ಇರುತ್ತದೆ. ರಾಹುಕಾಲ ಸಂಜೆ 4:58 ರಿಂದ 6:31 ರವರೆಗೆ ಇದೆ. ಶುಭ ಕಾಲ ಬೆಳಗ್ಗೆ 10:47 ರಿಂದ 12:20 ರವರೆಗೆ ಇರಲಿದೆ. ಇಂದು ಉಚ್ಚಿಲ ಮಹಾಲಕ್ಷ್ಮಿಯ ರಥೋತ್ಸವ, ಶ್ರೀ ಸುಬ್ರಹ್ಮಣ್ಯ ಉತ್ಸವ ಮತ್ತು ಕೊಲ್ಲಾಪುರದಲ್ಲಿ ಶ್ರೀ ಮಹಾಲಕ್ಷ್ಮಿಯ ರಥೋತ್ಸವ ನಡೆಯಲಿದೆ. ಅಶ್ವಿನಿ ಮಳೆಯ ಆರಂಭವಾಗಲಿದೆ. ಎಲ್ಲಾ ರಾಶಿಯವರಿಗೆ ಆರು ಗ್ರಹಗಳ ಅನುಗ್ರಹವಿದೆ. ಕೆಲ ರಾಶಿಗಳ ಆದಾಯದಲ್ಲಿ ಹೆಚ್ಚಳ, ಮಾನಸಿಕ ನೆಮ್ಮದಿ ಮತ್ತು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಪ್ರಗತಿಯ ಸೂಚನೆ ಇದೆ. ಈ ದಿನ ರವಿ ಮೇಷ ರಾಶಿಯಲ್ಲೂ ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ.