Daily Horoscope: ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ

Daily Horoscope: ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ

ವಿವೇಕ ಬಿರಾದಾರ
|

Updated on: Jan 14, 2025 | 6:31 AM

ಇಂದಿನ ನಿತ್ಯ ಪಂಚಾಂಗದ ಪ್ರಕಾರ ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಉತ್ತರಾಷಾಢ ನಕ್ಷತ್ರ ಇತ್ಯಾದಿ ವಿವರಗಳನ್ನು ಒಳಗೊಂಡಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರಿಂದ ಇಂದಿನ ರಾಶಿ ಭವಿಷ್ಯವನ್ನು ಒದಗಿಸಲಾಗಿದೆ. ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಯಮಘಂಟ ಕಾಲ, ಗುಳಿಕ ಕಾಲದ ವಿವರಗಳನ್ನೂ ಒಳಗೊಂಡಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವಿಷ್ಕಂಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:32 ರಿಂದ ಸಂಜೆ 04:56ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:52ರಿಂದ 11:17 ರವರೆಗೆ, ಗುಳಿಕ ಮಧ್ಯಹ್ನಾ 12:42 ರಿಂದ 02: 07 ರವರೆಗೆ.

ಮಕರ ಸಂಕ್ರಾತಿಯ ದಿನ ಗ್ರಹ ಸಂಚಾರ, ಹಾಗೂ ಯುತಿ ಅನುಸಾರವಾಗಿ, ಮಹಾ ನಾಯಕರು, ನಾಯಕರು, ಮಾಜಿ ನಾಯಕರು, ಪ್ರಸಿದ್ದ ವ್ಯಕ್ತಿಗಳಿಗೆ ಕಂಟಕಗಳು, ಜೈಲಿನ‌ ಭೀತಿ, ಕಾನೂನು ತೊಡಕು, ಹಾಗೂ ಆಡಳಿತದಲ್ಲಿ ಬಿರುಕು ಕಾಣಲಿರುವ ಗೋಚಾರ. ರಾಜ್ಯಗಳಲ್ಲಿ ಭಿನ್ನಮತ, ಸಿನಿಮಾ ರಂಗ ದೇಶದ, ರಾಜ್ಯದ ವ್ಯಕ್ತಿಗೆ ಹಾನಿ.
ಹೊಸ ನಾಯಕರ ಪ್ರವೇಶ, ರಾಜ್ಯಾಧ್ಯಕ್ಷರ ಬಗ್ಗೆ ಅಪಸ್ವರ ಸಾಧ್ಯತೆ. ಸಂಕ್ರಾಂತಿ ಪುರುಷನ ಘೋರ ಅವತಾರ, ಗುಣ ದೃಷ್ಟಿ ಎದುರಾಗುವ ಸಾಧ್ಯತೆ, ಅನ್ನಧಾತರಿಗೆ ಶುಭಫಲವಿದೆ.

ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು. ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಳ ಗಣಿತಜ್ಞರಾದ ಭಾಸ್ಕರಾಚಾರ್ಯ ಮತ್ತು ವರಾಹ ಮಿಹಿರ ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.