‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಪ್ರೀತಿ ಹುಟ್ಟಿದೆ. ತ್ರಿವಿಕ್ರಂ ಅವರು ಓಪನ್ ಆಗಿ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದು ದೊಡ್ಮನೆಯಲ್ಲಿ ಕೊನೆ ಆಗುವ ಸೂಚನೆಯೂ ಸಿಕ್ಕಿದೆ. ಈ ಬಗ್ಗೆ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಪ್ರೀತಿ ಹುಟ್ಟಿತು ಎನ್ನುವಾಗಲೇ ಇಬ್ಬರ ಮಧ್ಯೆ ಕಿರಿಕ್ ಶುರುವಾಗಿದೆ. ತಮ್ಮನ್ನು ಭವ್ಯಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತ್ರಿವಿಕ್ರಂ ಮಾಡಿದ್ದಾರೆ. ಅಲ್ಲದೆ, ಭವ್ಯಾ ವಿರುದ್ಧ ಖಾರದ ಮಾತುಗಳನ್ನು ಬಳಕೆ ಮಾಡಿದ್ದಾರೆ. ‘ನಿಮ್ಮ ಬಂಡವಾಳ ಗೊತ್ತಾಯ್ತು, ಪುಂಗಬೇಡ’ ಎಂಬಿತ್ಯಾದಿ ಶಬ್ದಗಳ ಬಳಕೆ ಆಗಿದೆ. ಇದರಿಂದ ಭವ್ಯಾ ಹಾಗೂ ತ್ರಿವಿಕ್ರಂ ದೂರವಾಗುವ ಸೂಚನೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos