ಮಂಡ್ಯ: ಶಿವಲಿಂಗಕ್ಕೆ ಸ್ಪರ್ಶಿಸದ ಸೂರ್ಯ ರಶ್ಮಿ, ಕಾದಿದೆಯಾ ಗಂಡಾಂತರ?, ಸ್ವಾಮೀಜಿ ಹೇಳಿದ್ದಿಷ್ಟು
ಮಕರ ಸಂಕ್ರಾಂತಿಯಂದು ಮಂಡ್ಯದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರ ದೇಗುಲದಲ್ಲಿ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವುದು ವಾಡಿಕೆ. ಆದರೆ, ಈ ಬಾರಿ ಸೂರ್ಯನ ಕಿರಣಗಳು ಬಿದ್ದಿಲ್ಲ.ಇದರಿಂದ ಪ್ರಕೃತಿ ವಿಕೋಪಗಳ ಭಯ ಹೆಚ್ಚಿದೆ ಎಂದು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಭಕ್ತರಿಗೂ ನಿರಾಸೆಯಾಗಿದೆ. ಸೂರ್ಯನ ಕಿರಣಗಳು ಬೀಳದಿರುವುದು ಒಂದು ಮುನ್ಸೂಚನೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮಂಡ್ಯ, ಜನವರಿ 14: ಮಕರ ಸಂಕ್ರಮಣ (Sankranti) ದಿನ ಸೂರ್ಯ ಪಥ ಬದಲಿಸಿ, ಉತ್ತರಾಯಣಕ್ಕೆ ಬರುತ್ತಾನೆ. ಈ ಸಮಯದಲ್ಲಿ ಪ್ರತಿವರ್ಷ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿರುವ ಚಂದ್ರವನ ಆಶ್ರಮದಲ್ಲಿನ ಕಾಶಿ ಚಂದ್ರಮೌಳೇಶ್ವರ (Chandramouleshwara Swamy) ಸ್ವಾಮಿ ದೇಗುಲದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ.
ಆದರೆ, ಈ ಬಾರಿ ಶಿವಲಿಂಗಕ್ಕೆ ಸೂರ್ಯನ ರಶ್ಮಿ ಸ್ಪರ್ಶಿಸಲಿಲ್ಲ. ಇದರಿಂದ, ಈ ಬಾರಿ ಜಗತ್ತಿಗೆ ಕಾದಿದೆಯಾ ಗಂಡಾಂತರ ಎಂಬ ಪ್ರಶ್ನೆ ಉದ್ಭವವಾಗಿದೆ. ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
“ಈ ಬಾರಿ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ, ಹೆಚ್ಚು ಮಳೆಯಾಗಿ ಅತಿವೃಷ್ಟಿ, ಭೂಕಂಪ ಅನಾಹುತ ಆಗಬಹುದು. ರಾಷ್ಟ್ರ-ರಾಷ್ಟ್ರಗಳ ನಡುವೆ ಯುದ್ಧ ಆಗಬಹುದು. ಇದ್ಯಾದುವುದು ಆಗಬಾರದು ಎಂದು ನಾನು ಪ್ರಾರ್ಥನೆದ್ದೇನೆ. ಇದೆಲ್ಲವು, ಪ್ರಕೃತಿಯ ಮೇಲೆ ನಾವು ಮಾಡುತ್ತಿರುವ ಕೆಡುಕುಗಳಿಂದ ಆಗುತ್ತಿದೆ. ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳದೆ ಇರುವು ಮುನ್ಸೂಚನೆಯಾಗಿದೆ” ಎಂದು ಹೇಳಿದರು.
ಇನ್ನು, ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳುವ ವಿಸ್ಮಯಕಾರಿ ಪ್ರಸಂಗವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ