Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ

Updated on: May 22, 2025 | 6:40 AM

ಈ ದಿನದ ರಾಶಿ ಫಲವನ್ನು ಡಾ. ಬಸವರಾಜ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲ, ಆದಾಯದಲ್ಲಿ ಏರಿಕೆ ಮತ್ತು ಕುಟುಂಬದಲ್ಲಿ ಸಹಕಾರ ಇದೆ. ವೃಷಭ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ವ್ಯಾಪಾರದಲ್ಲಿ ಲಾಭ ಮತ್ತು ಮಕ್ಕಳಿಂದ ಶುಭ ಸುದ್ದಿ ಇದೆ.

ಬೆಂಗಳೂರು, ಮೇ 22: ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣಪಕ್ಷ, ದಶಮಿ, ಪೂರ್ವಾಭಾದ್ರ ನಕ್ಷತ್ರ ಮತ್ತು ವಿಷ್ಕಂಭ ಯೋಗವಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಗುರುವಾರದ ರಾಶಿ ಫಲಗಳನ್ನು ವಿವರಿಸಿದ್ದಾರೆ. ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದೆ. ರಾಶ್ಯಾಧಿಪತಿಯಾದ ಕುಜ ಕರ್ಕಾಟಕ ರಾಶಿಯಲ್ಲಿದ್ದು, ಚಂದ್ರ ಮೀನ ರಾಶಿಯ ಪೂರ್ವಾಭಾದ್ರ ನಕ್ಷತ್ರದಲ್ಲಿದೆ. ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಲಾಭ, ಕುಟುಂಬದಲ್ಲಿ ಪೂರ್ಣ ಸಹಕಾರ ಮತ್ತು ಅಣ್ಣ-ತಮ್ಮಂದಿರೊಂದಿಗೆ ಒಳ್ಳೆಯ ಸಂಬಂಧ ಇರುತ್ತದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More