ರವಿ ಕುಂಭ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
2025 ರ ಮಾರ್ಚ್ 13, ಗುರುವಾರದ ದಿನಭವಿಷ್ಯವನ್ನು ಈ ಲೇಖನ ಒಳಗೊಂಡಿದೆ. ಹೋಳಿ ಹಬ್ಬದ ಶುಭಾಶಯಗಳೊಂದಿಗೆ, ದ್ವಾದಶ ರಾಶಿಗಳ ಫಲಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಗೆ ಅದೃಷ್ಟ ಸಂಖ್ಯೆ, ಶುಭ ದಿಕ್ಕು, ಮತ್ತು ಜಪಿಸಬೇಕಾದ ಮಂತ್ರವನ್ನು ತಿಳಿಸಲಾಗಿದೆ. ದೇವರಾಯನದುರ್ಗ ಮತ್ತು ಬಾಗೂರಿನಲ್ಲಿ ನಡೆಯುವ ಉತ್ಸವಗಳ ಮಾಹಿತಿಯನ್ನೂ ನೀಡಲಾಗಿದೆ.
ಇಂದು ಗುರುವಾರ, 13 ಮಾರ್ಚ್ 2025, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷ ಇರುವ ಈ ದಿನದ ರಾಹುಕಾಲ 1.59 ರಿಂದ 3.29 ರ ತನಕ ರಾಹುಕಾಲ ಇರುತ್ತದೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ 12.29 ರಿಂದ 1.59 ರ ತನಕ ಇರಲಿದೆ. ಗುರುಗಳ ಲಹರಿಗಳು ಇರುವ ಈ ದಿನದ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.