Daily Horoscope: ಶುಕ್ರನ ಸಂಚಾರದಿಂದ ಈ ರಾಶಿಯವರ ವ್ಯಾಪಾರದಲ್ಲಿ ಪ್ರಗತಿ

Updated on: Jun 26, 2025 | 6:40 AM

ಜೂನ್ 26ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ, ಮತ್ತು ಕುಟುಂಬದಲ್ಲಿ ಸಂತೋಷದ ಮನೆ ಮಾಡಲಿದೆ. ಪ್ರತಿಯೊಂದು ರಾಶಿಗೆ ಸೂಕ್ತ ಬಣ್ಣ ಮತ್ತು ದಿಕ್ಕನ್ನು ಸೂಚಿಸಲಾಗಿದೆ. ಅದೃಷ್ಟ ಸಂಖ್ಯೆಗಳನ್ನೂ ತಿಳಿಸಲಾಗಿದೆ.

ಬೆಂಗಳೂರು, ಜೂನ್​ 26: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ರಾಶಿಫಲಗಳನ್ನು ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ. ಆರ್ಥಿಕ ಪ್ರಗತಿ, ಸಂತೋಷ ಮತ್ತು ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಮಿಥುನ ರಾಶಿಯ ಮಹಿಳೆಯರಿಗೆ ವಿಶೇಷ ಶುಭವಿದೆ. ವ್ಯಾಪಾರದಲ್ಲಿ ಪ್ರಗತಿ, ಖರ್ಚು ಕಡಿಮೆ ಮತ್ತು ಕುಟುಂಬದಲ್ಲಿ ಸಂತೋಷವಿರಲಿದೆ. ವೃಷಭ ರಾಶಿಯವರಿಗೆ ಆರ್ಥಿಕ ಲಾಭ, ಕೆಲಸದಲ್ಲಿ ಯಶಸ್ಸು ಮತ್ತು ಕುಟುಂಬದಲ್ಲಿ ಅನ್ಯೋನ್ಯತೆ ಇರುತ್ತದೆ. ಪ್ರತಿ ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಬಣ್ಣವನ್ನು ಸೂಚಿಸಲಾಗಿದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More