Video: ದಮ್ಮನಕಟ್ಟೆ ಸಫಾರಿ ವೇಳೆ ಪ್ರವಾಸಿಗರ ಮುಂದೆ ಕಾಣಿಸಿಕೊಂಡ ಹುಲಿ, ಪ್ರವಾಸಿಗರು ಫುಲ್​​​ ಖುಷ್

Updated on: Oct 15, 2025 | 11:44 AM

ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಯೊಂದು ನಿರ್ಭಯವಾಗಿ ಓಡಾಡುತ್ತಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಮೈಸೂರಿನ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂದಿದ್ದು ವೀಕ್ಷಕರಿಗೆ ಸ್ಮರಣೀಯ ಅನುಭವ ನೀಡಿದೆ. ಪ್ರವಾಸಿಗರು ಹುಲಿಯ ನಿರ್ಭೀತ ಓಡಾಟ ನೋಡಿ "ಚಿನ್ನ, ಚಿನ್ನ" ಎಂದು ಪ್ರೀತಿಯಿಂದ ಕೂಗಿದ್ದಾರೆ.  ಈ ಬಗ್ಗೆ ಇಲ್ಲಿದೆ ವಿಡಿಯೋ 

ಮೈಸೂರು, ಅ.15: ಮೈಸೂರಿನ ದಮ್ಮನಕಟ್ಟೆ ಸಫಾರಿ (Dammanakatte Safari) ವೇಳೆ ಹುಲಿಯೊಂದು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯ ಪ್ರವಾಸಿಗರ ಕಣ್ಣಿಗೆ ರಸದೌತಣ ನೀಡಿತ್ತು. ಈ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿದೆ. ಅಪರೂಪದ ದೃಶ್ಯ ಪ್ರವಾಸಿಗರ ಮೊಗದಲ್ಲಿ ಸಂತಸ ತಂದಿದೆ. ಕಬಿನಿ ಹಿನ್ನೀರು ಮತ್ತು ಹೆಚ್.ಡಿ.ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ದಮ್ಮನಕಟ್ಟೆಯು ವನ್ಯಜೀವಿ ಸಫಾರಿ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಸಫಾರಿ ವೇಳೆ ಹುಲಿಯನ್ನು ಕಂಡ ಪ್ರವಾಸಿಗರು, “ಅಲ್ಲಿ ಸರ್ ನೋಡಿ ಅಯ್ಯೋ, ಸಕ್ಕತ್ತಾಗಿದೆ!” ಎಂದು ಅಚ್ಚರಿಯಿಂದ ಹೇಳಿಕೊಂಡಿದ್ದಾರೆ. ಇನ್ನು ಕೆಲವು ಪ್ರವಾಸಿಗರು ಹುಲಿಯ ನಿರ್ಭೀತ ಓಡಾಟ ನೋಡಿ “ಚಿನ್ನ, ಚಿನ್ನ” ಎಂದು ಪ್ರೀತಿಯಿಂದ ಕೂಗಿದ್ದಾರೆ. ಈ ದೃಶ್ಯವು ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಅವಿಸ್ಮರಣೀಯ ಕ್ಷಣವನ್ನು ನೀಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ