ಹಾಸನಾಂಬ ಸನ್ನಿಧಿಯಲ್ಲಿ ಡಿಕೆಶಿಯಿಂದ ನಾರಾಯಣಿ ಮಂತ್ರ, ಖಡ್ಗಮಾಲಾ ಸ್ತೋತ್ರ ಪಠಣ: ಅಚ್ಚರಿಯ ಮಾಹಿತಿ ನೀಡಿದ ಅರ್ಚಕರು
ಹಾಸನಾಂಬೆ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೆರವೇರಿಸಿದ ನಾರಾಯಣಿ ನಮಸ್ಕಾರ ಮತ್ತು ಖಡ್ಗಮಾಲಾ ಸ್ತೋತ್ರದ ಕುರಿತು ಅರ್ಚಕ ಸುಚಿನ್ ಅವರು ಮಾಹಿತಿ ನೀಡಿದ್ದಾರೆ. ಈ ಸ್ತೋತ್ರಗಳ ಪಠಣೆಯಿಂದ ದೊರಕುವ ಪೂಜಾಫಲ, ಶತ್ರುನಾಶ, ರೋಗ ನಿವಾರಣೆ ಮತ್ತು ಭಕ್ತರ ಇಷ್ಟಾರ್ಥ ಸಿದ್ಧಿಯ ಮಹತ್ವವನ್ನು ಅವರು ವಿವರಿಸಿದರು. ಪೂಜೆ ವೇಳೆ ದೊರೆತ ಪ್ರಸಾದದ ಸೂಚಕ ಮಹತ್ವವನ್ನೂ ತಿಳಿಸಿದರು.
ಹಾಸನ, ಅಕ್ಟೋಬರ್ 15: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನೋತ್ಸವದ ಆರನೇ ದಿನದಂದು, ಹಾಸನ ಜಿಲ್ಲೆಗೆ ಲಕ್ಷಾಂತರ ಭಕ್ತರು ಹರಿದುಬರುತ್ತಿದ್ದಾರೆ. ಸುಮಾರು 8 ಲಕ್ಷಕ್ಕೂ ಅಧಿಕ ಭಕ್ತರು ಈಗಾಗಲೇ ದರ್ಶನ ಪಡೆದಿದ್ದಾರೆ. ಹಲವು ರಾಜಕೀಯ ಗಣ್ಯರು ಹಾಗೂ ಪ್ರಮುಖರು ಸಹ ದೇವಿಯ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಸನಾಂಬೆ ದರ್ಶನ ಪಡೆದು ನಾರಾಯಣಿ ನಮಸ್ಕಾರ ಮತ್ತು ಖಡ್ಗಮಾಲಾ ಸ್ತೋತ್ರ ಪಠಿಸಿದ್ದಾರೆ. ಈ ಕುರಿತು ಅರ್ಚಕ ಸುಚಿನ್ ಅವರು ಮಾತನಾಡಿದ್ದು, ಖಡ್ಗಮಾಲಾ ಸ್ತೋತ್ರ ಮತ್ತು ನಾರಾಯಣಿ ಸ್ತುತಿಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ.
ಅವರು ಹೇಳಿದ ಪ್ರಕಾರ, ನಾರಾಯಣಿ ಸ್ತುತಿಯು ದುರ್ಗಾ ಸಪ್ತಶತಿಯ 11ನೇ ಅಧ್ಯಾಯದಲ್ಲಿದ್ದು, 700 ಶ್ಲೋಕಗಳನ್ನು ಒಳಗೊಂಡಿದೆ. ಇದು ದೇವಿಯ ವರ್ಣನೆ, ರಕ್ಷಣೆ ಕೋರಿಕೆ ಮತ್ತು ಪಾಪ ನಿವಾರಣೆಗೆ ಮಹತ್ವದ್ದಾಗಿದೆ. ಖಡ್ಗಮಾಲಾ ಸ್ತೋತ್ರವು ದುರ್ಗಾದೇವಿಯ ಆಯುಧಗಳ ವಿವರಣೆ ನೀಡಿ, ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿನಾಶಕ್ಕೆ ನೆರವಾಗುತ್ತದೆ. ಈ ಸ್ತೋತ್ರಗಳು ಕೇವಲ ವೈಯಕ್ತಿಕ ಪ್ರಯೋಜನಕ್ಕೆ ಸೀಮಿತವಲ್ಲದೆ, ಲೋಕ ಕಲ್ಯಾಣ ಮತ್ತು ಸಸ್ಯವೃಷ್ಟಿ, ಪುಷ್ಪವೃಷ್ಟಿಗಾಗಿ ಪ್ರಾರ್ಥನೆ ಸಲ್ಲಿಸಲು ಸಹಕಾರಿಯಾಗಿವೆ ಎಂದು ಅವರು ತಿಳಿಸಿದರು. ಪೂಜೆ ವೇಳೆ ಡಿ.ಕೆ. ಶಿವಕುಮಾರ್ ಅವರಿಗೆ ದೇವಿ ಪ್ರಸಾದ ದೊರೆತಿದ್ದು, ಇದು ಭಗವತಿಯ ಆಶೀರ್ವಾದದ ಸಂಕೇತ ಎಂದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
