Video: ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ಬಸ್ಸಿಂದ ಬ್ಯಾಗ್​ಗಳನ್ನು ಕದ್ದ ಕಳ್ಳರು

Updated on: Dec 09, 2025 | 8:24 AM

ಸೋಲಾಪುರ-ಧುಲೆ ಹೆದ್ದಾರಿಯಲ್ಲಿ ಅದರಲ್ಲೂ ವಿಶೇಷವಾಗಿ ಪಚೋಡ್ ಮತ್ತು ಯೆಡ್ಶಿ ನಡುವಿನ ಪ್ರದೇಶದಲ್ಲಿ ದರೋಡೆಗಳು ಹೆಚ್ಚಾಗಿವೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಧಿಕಾರಿಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದಾರೆ ಮತ್ತು ಗುರಿಯಿಟ್ಟು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ ಆದರೂ ಇಂಥಾ ಹಲವು ಘಟನೆಗಳು ನಡೆಯುತ್ತಿವೆ. ದರೋಡೆಕೋರರ ಗುಂಪು ಪ್ರಯಾಣಿಕರ ವಾಹನಗಳನ್ನು ನಿಲ್ಲಿಸಿ ಬೆದರಿಸಿ ದರೋಡೆ ಮಾಡುತ್ತಿದ್ದಾರೆ.

ಬೀಡ್, ಡಿಸೆಂಬರ್ 09: ಸೋಲಾಪುರ-ಧುಲೆ ಹೆದ್ದಾರಿಯಲ್ಲಿ ಅದರಲ್ಲೂ ವಿಶೇಷವಾಗಿ ಪಚೋಡ್ ಮತ್ತು ಯೆಡ್ಶಿ ನಡುವಿನ ಪ್ರದೇಶದಲ್ಲಿ ದರೋಡೆಗಳು ಹೆಚ್ಚಾಗಿವೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಧಿಕಾರಿಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದಾರೆ ಮತ್ತು  ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ ಆದರೂ ಇಂಥಾ ಹಲವು ಘಟನೆಗಳು ನಡೆಯುತ್ತಿವೆ. ದರೋಡೆಕೋರರ ಗುಂಪು ಪ್ರಯಾಣಿಕರ ವಾಹನಗಳನ್ನು ನಿಲ್ಲಿಸಿ ಬೆದರಿಸಿ ದರೋಡೆ ಮಾಡುತ್ತಿವೆ.

ಬಸ್ಸಿನಲ್ಲಿ ಅಳವಡಿಸಲಾದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ, ಬಸ್ ಹಿಂದೆ ಐದರಿಂದ ಆರು ಬೈಕ್‌ಗಳಲ್ಲಿ ದರೋಡೆಕೋರರು ಬರುತ್ತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಇನ್ನೊಬ್ಬರ ಭುಜದ ಮೇಲೆ ಹತ್ತಿ ಚಲಿಸುವ ಬಸ್ಸಿನ ಮೇಲೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬಳಿಕ ಒಂದೊಂದಾಗೆ ಬ್ಯಾಗ್​ ಅನ್ನು ರಸ್ತೆಗೆ ಎಸೆದಿದ್ದಾರೆ. ಚಾಲಕನಿಗೆ ಅನುಮಾನ ಬಂದು ಬಸ್ ನಿಧಾನ ಮಾಡಿದಾಗ ಆ ವ್ಯಕ್ತಿ ಬಸ್ಸಿಂದ ಕೆಳಗೆ ಹಾರುತ್ತಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ