Video: ಹೆಲ್ಮೆಟ್ ಧರಿಸಿ ಕಾರು ಚಲಾಯಿಸಿದ ವ್ಯಕ್ತಿ, ಕಾರಣ ಕೇಳಿದ್ರೆ ನೀವೂ ನಗ್ತೀರಿ
ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸಿ ಕಾರು ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಕಾರಣ ಕೇಳಿದ್ರೆ ನಿಮಗೂ ನಗು ಬರುತ್ತೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಅವರು ತಮ್ಮ ಕಾರು ಚಲಾಯಿಸುತ್ತಿರುವಾಗ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು 1,100 ರೂ. ದಂಡ ವಿಧಿಸಿದ್ದರಂತೆ , ಮತ್ಯಾಕೆ ದಂಡ ಹಾಕಿಸಿಕೊಳ್ಳುವುದು ಎಂದು ಕಾರಲ್ಲೂ ಹೆಲ್ಮೆಟ್ ಹಾಕೊಂಡೇ ಹೋಗ್ತೀನಿ ಅಂತಾರೆ ಗುಲ್ಶನ್. ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ಪೊಲೀಸರು ಕಾರಿನಲ್ಲಿದ್ದ ನನಗೆ ಯಾಕೆ ದಂಡ ವಿಧಿಸಿದರೋ ಗೊತ್ತಿಲ್ಲ, ದಂಡ ವಿಧಿಸಿದಾಗಿನಿಂದ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತಿದ್ದೇನೆ ಎಂದಿದ್ದಾರೆ.
ಆಗ್ರಾ, ಡಿಸೆಂಬರ್ 09: ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸಿ ಕಾರು ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಕಾರಣ ಕೇಳಿದ್ರೆ ನಿಮಗೂ ನಗು ಬರುತ್ತೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಅವರು ತಮ್ಮ ಕಾರು ಚಲಾಯಿಸುತ್ತಿರುವಾಗ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು 1,100 ರೂ. ದಂಡ ವಿಧಿಸಿದ್ದರಂತೆ , ಮತ್ಯಾಕೆ ದಂಡ ಹಾಕಿಸಿಕೊಳ್ಳುವುದು ಎಂದು ಕಾರಲ್ಲೂ ಹೆಲ್ಮೆಟ್ ಹಾಕೊಂಡೇ ಹೋಗ್ತೀನಿ ಅಂತಾರೆ ಗುಲ್ಶನ್. ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ಪೊಲೀಸರು ಕಾರಿನಲ್ಲಿದ್ದ ನನಗೆ ಯಾಕೆ ದಂಡ ವಿಧಿಸಿದರೋ ಗೊತ್ತಿಲ್ಲ, ದಂಡ ವಿಧಿಸಿದಾಗಿನಿಂದ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತಿದ್ದೇನೆ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

