ಡಾರ್ಜಿಲಿಂಗ್ ಭೂಕುಸಿತ; ಪ್ರಾಣದ ಹಂಗು ತೊರೆದು ಎನ್​ಡಿಆರ್​ಎಫ್​​ನಿಂದ ರಕ್ಷಣಾ ಕಾರ್ಯಾಚರಣೆ

Updated on: Oct 05, 2025 | 4:40 PM

ಡಾರ್ಜಿಲಿಂಗ್ ಜಿಲ್ಲೆಯಾದ್ಯಂತ ಶನಿವಾರ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಮನೆಗಳು ನೆಲಸಮವಾಗಿದ್ದು, ರಸ್ತೆಗಳಿಗೆ ಹಾನಿಯಾಗಿದೆ. 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುರಿದು ಬಿದ್ದ ಸೇತುವೆಯಿಂದಾಗಿ ಸಂಪರ್ಕ ಕಡಿದುಕೊಂಡ ಹಳ್ಳಿಯಲ್ಲಿನ ಜನರನ್ನು ರೋಪ್ ಸಹಾಯದಿಂದ ಈಚೆ ದಡಕ್ಕೆ ಕರೆತರಲಾಗಿದೆ. ಪ್ರಾಣದ ಹಂಗು ತೊರೆದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಇಲ್ಲಿದೆ.

ಡಾರ್ಜಿಲಿಂಗ್, ಅಕ್ಟೋಬರ್ 5: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ (Darjeeling  Landslide) ಜಿಲ್ಲೆಯಾದ್ಯಂತ ಶನಿವಾರ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಮನೆಗಳು ನೆಲಸಮವಾಗಿದ್ದು, ರಸ್ತೆಗಳಿಗೆ ಹಾನಿಯಾಗಿದೆ. 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮುರಿದು ಬಿದ್ದ ಸೇತುವೆಯಿಂದಾಗಿ ಸಂಪರ್ಕ ಕಡಿದುಕೊಂಡ ಹಳ್ಳಿಯಲ್ಲಿನ ಜನರನ್ನು ರೋಪ್ ಸಹಾಯದಿಂದ ಈಚೆ ದಡಕ್ಕೆ ಕರೆತರಲಾಗಿದೆ. ಪ್ರಾಣದ ಹಂಗು ತೊರೆದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ