ಅಮೃತಾ ಅಯ್ಯಂಗಾರ್ ನಟನೆಯ ‘ಅಬ್ಬಬ್ಬ’ ಚಿತ್ರ ನೋಡಿ ವಿಮರ್ಶೆ ತಿಳಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ
ಅಮೃತಾ ಅಯ್ಯಂಗಾರ್ ನಟನೆಯ ‘ಅಬ್ಬಬ್ಬ’ ಚಿತ್ರ ಫೆಬ್ರವರಿ 16ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗುವ ಮೊದಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಈ ಸಿನಿಮಾನ ವೀಕ್ಷಿಸಿದ್ದಾರೆ. ಅವರು ‘ಅಬ್ಬಬ್ಬ’ ಚಿತ್ರವನ್ನು ಹೊಗಳಿದ್ದಾರೆ. ಆ ವಿಡಿಯೋ ಇಲ್ಲಿದೆ.
ಅಮೃತಾ ಅಯ್ಯಂಗಾರ್ ನಟನೆಯ ‘ಅಬ್ಬಬ್ಬ’ ಸಿನಿಮಾ ಈ ವಾರ (ಫೆಬ್ರವರಿ 16) ರಿಲೀಸ್ ಆಗುತ್ತಿದೆ. ಈ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗುವ ಮೊದಲೇ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ ಈ ಸಿನಿಮಾನ ವೀಕ್ಷಿಸಿದ್ದಾರೆ. ಅವರು ‘ಅಬ್ಬಬ್ಬ’ ಚಿತ್ರವನ್ನು ಹೊಗಳಿದ್ದಾರೆ. ‘ಒಂದೊಳ್ಳೆಯ ಕಾಮಿಡಿ ಸಿನಿಮಾ’ ಎಂದು ಡಾರ್ಲಿಂಗ್ ಕೃಷ್ಣ ಮೆಚ್ಚುಗೆ ಸೂಚಿಸಿದ್ದಾರೆ. ‘ನನಗೆ ಕಾಮಿಡಿ ಸಿನಿಮಾಗಳು ಇಷ್ಟ ಆಗುತ್ತವೆ. ಈ ಚಿತ್ರ ಸಾಕಷ್ಟು ಇಷ್ಟ ಆಯ್ತು’ ಎಂದಿದ್ದಾರೆ ಮಿಲನಾ ನಾಗರಾಜ್. ‘ಅಬ್ಬಬ್ಬ’ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಹಾಗೂ ಅಮೃತಾ ಒಟ್ಟಾಗಿ ನಟಿಸಿದ್ದಾರೆ. ಧನರಾಜ್ ಆಚಾರ್, ಅನುಷಾ ರೈ, ಶರತ್ ಲೋಹಿತಾಶ್ವ, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ