ದರ್ಶನ್ ಆರೋಪಿ ಮಾತ್ರ, ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ನಟಿ  

ದರ್ಶನ್ ಆರೋಪಿ ಮಾತ್ರ, ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ನಟಿ  

Mangala RR
| Updated By: ರಾಜೇಶ್ ದುಗ್ಗುಮನೆ

Updated on: Jul 05, 2024 | 8:31 AM

ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯಿತು. ಜುಲೈ 18ರವರೆಗೆ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣದ ಬಗ್ಗೆ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ.

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಅವರ ನ್ಯಾಯಾಂಗ ಬಂಧನವನ್ನು ಜುಲೈ 18ರವರೆಗೆ ವಿಸ್ತರಿಸಲಾಗಿದೆ. ಈಗ ದರ್ಶನ್ ಪ್ರಕರಣದ ಬಗ್ಗೆ ಅವರ ಜೊತೆ ನಟಿಸಿರೋ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ. ‘ತಾರಕ್ ಸಿನಿಮಾದಲ್ಲಿ ನಾವಿಬ್ಬರು ಒಟ್ಟಿಗೆ ನಟಿಸಿದ್ದೆವು. ಅದಕ್ಕೂ ಮೊದಲು ಅವರು ಕೇವಲ ನಟ ಎಂದುಕೊಂಡಿದ್ದೆ. ಅವರು ನಮ್ಮನ್ನು ನಡೆಸಿಕೊಂಡು ರೀತಿಯಿಂದ ನಾನು ಬದಲಾದೆ. ಅವರ ದೊಡ್ಡ ಅಭಿಮಾನಿಯಾದೆ. ಊಹಾಪೋಹಗಳ ಬಗ್ಗೆ ನಾನು ಮಾತನಾಡಲ್ಲ. ಕಣ್ಣಾರೆ ಕಾಣದೇ ಇರುವುದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ. ದರ್ಶನ್ ಅವರ ಬಗ್ಗೆ ನ್ಯಾಯಾಂಗದಿಂದ ತೀರ್ಪು ಬರಬೇಕು. ಆ ಬಳಿಕವೇ ನಾನು ನಂಬೋದು. ನನ್ನ ಅಭಿಪ್ರಾಯ ಹೇಳುವಷ್ಟು ತಿಳುಳಿಕೆ ಇದೆ. ಕೃತ್ಯದ ಬಗ್ಗೆ ವಿಷಾದ ಇದೆ. ಕಾನೂ ಇದೆ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿ’ ಎಂದರು ಯಮುನಾ ಶ್ರೀನಿಧಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.