‘ದರ್ಶನ್​ಗೆ ಸರ್ಜರಿ ಇಷ್ಟ ಇಲ್ಲ’: ಕಾರಣ ತಿಳಿಸಿದ ಸುಮಲತಾ ಅಂಬರೀಷ್

Edited By:

Updated on: Nov 08, 2024 | 10:56 PM

ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ದರ್ಶನ್ ಅವರಿಗೆ ಜಾಮೀನು ನೀಡಲಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಸುಮಲತಾ ಅಂಬರೀಷ್ ಅವರು ಮಾತನಾಡಿದ್ದಾರೆ. ದರ್ಶನ್ ಅವರ ಆರೋಗ್ಯದ ಬಗ್ಗೆ ಸುಮಲತಾ ಅಪ್​ಡೇಟ್​ ನೀಡಿದ್ದಾರೆ. ದರ್ಶನ್​ಗೆ ಸರ್ಜರಿ ಇಷ್ಟ ಇಲ್ಲ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.

ಸುಮಲತಾ ಅಂಬರೀಷ್ ಹಾಗೂ ದರ್ಶನ್ ಅವರ ನಡುವೆ ಉತ್ತಮ ಒಡನಾಟ ಇದೆ. ಈಗ ಬೆನ್ನು ನೋವಿಗೆ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುರಿತು ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ. ‘ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿ ಅವರಿಗೆ ಇಷ್ಟ ಇಲ್ಲ ಅಂತ ನಾನು ಕೇಳ್ಪಟ್ಟೆ. ಯಾಕೆಂದರೆ, ಸರ್ಜರಿ ಮಾಡಿದರೆ ರಿಕವರಿ ಸಮಯ ತುಂಬ ಇರುತ್ತೆ. ಶೂಟಿಂಗ್ ಅರ್ಧಕ್ಕೆ ನಿಂತಿದೆ. ಇದು ಸಿನಿಮಾ ಇಂಡಸ್ಟ್ರಿ ನಷ್ಟ ಎದುರಿಸುತ್ತಿರುವ ಸಂದರ್ಭ. ಹೆಚ್ಚಿನ ಮಾಹಿತಿ ಇಲ್ಲ. ದರ್ಶನ್ ಕೈಯಲ್ಲಿ ಫೋನ್ ಇಲ್ಲ. ಅವರ ಪತ್ನಿ ಜೊತೆ ನಾವು ಸಂಪರ್ಕ ಮಾಡಬೇಕು ಅಷ್ಟೇ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More