ಜೈಲು ಊಟದಿಂದ ದರ್ಶನ್​ಗೆ ಆಗಿದೆ ಹಲವು ಆರೋಗ್ಯ ಸಮಸ್ಯೆ; ಇಲ್ಲಿದೆ ವಿವರ

| Updated By: ಮದನ್​ ಕುಮಾರ್​

Updated on: Jul 16, 2024 | 7:32 PM

ಜೈಲು ಊಟ ಸೇವಿಸಿದ್ದರಿಂದ ದರ್ಶನ್​ ಅವರಿಗೆ ಏನೆಲ್ಲ ಸಮಸ್ಯೆಗಳು ಆಗಿವೆ ಎಂಬುದನ್ನು ನ್ಯಾಯಾಲಯಕ್ಕೆ ವಕೀಲರು ವಿವರಿಸಿದ್ದರು. ಆ ಬಗ್ಗೆ ತಪಾಸಣೆ ನಡೆಸುವಂತೆ ಜೈಲಿನ ವೈದ್ಯರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ವೈದ್ಯರು ನೀಡುವ ವರದಿಯ ಆಧಾರದ ಮೇಲೆ ದರ್ಶನ್​ಗೆ ಮನೆ ಊಟ ತರಿಸಲು ಕೋರ್ಟ್​ ಅನುಮತಿ ನೀಡುತ್ತಾ ಎಂಬ ಕೌತುಕ ಮೂಡಿದೆ.

ಹೊರಗಡೆ ಇದ್ದಾಗ ಸೆಲೆಬ್ರಿಟಿಯಾಗಿ ಐಷಾರಾಮಿ ಜೀವನ ನಡೆಸಿದ ದರ್ಶನ್​ ಅವರು ಈಗ ಜೈಲಿಯಲ್ಲಿ ಕಷ್ಟಪಡುತ್ತಿದ್ದಾರೆ. ಪ್ರಮುಖವಾಗಿ ಜೈಲಿನ ಊಟದಿಂದ ದರ್ಶನ್​ಗೆ ತೊಂದರೆ ಆಗುತ್ತಿದೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಊಟ ತರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ದರ್ಶನ್​ ಮನವಿ ಮಾಡಿದ್ದಾರೆ. ಜೈಲು ಊಟ ಸೇವಿಸಿದ್ದರಿಂದ ದರ್ಶನ್​ಗೆ ಲೂಸ್​ ಮೋಷನ್​ ಶುರುವಾಗಿದೆ. ದೇಹದ ತೂಕ ಕಡಿಮೆ ಆಗುತ್ತಿದೆ. ಫಿಟ್ನೆಸ್​ ಕೂಡ ಹಾಳಾಗುತ್ತಿದೆ. ಮನೆ ಊಟ ಸೇವಿಸಿದರೆ ಈ ಸಮಸ್ಯೆ ಸರಿ ಆಗಬಹುದು ಎಂಬ ಕಾರಣದಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಜೈಲಿನ ವೈದ್ಯರು ನೀಡುವ ವರದಿ ಆಧಾರದ ಮೇಲೆ ನ್ಯಾಯಾಲಯ ಮುಂದಿನ ಸೂಚನೆ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.