‘ಬಿಸಿಲು ಕಾಣದೆ ಕೈಯೆಲ್ಲ ಫಂಗಸ್ ಬಂದಿದೆ’; ಜಡ್ಜ್ ಎದುರು ದರ್ಶನ್ ಕಣ್ಣೀರು
ದರ್ಶನ್ ಅವರಿಗೆ ಜೈಲು ಅಕ್ಷರಶಃ ನರಕಯಾತನೆ ಆಗಿದೆ. ಅವರು ಈಗ ಜಡ್ಜ್ ಎದುರೇ ವಿಷ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೇಳಿ ಜಡ್ಜ್ ಸಾಕಷ್ಟು ಶಾಕ್ ಆದರು. ಈ ರೀತಿ ಕೇಳಬಾರದು ಎಂದು ಅವರು ಹೇಳಿದ್ದಾರೆ. ಕೆಲವರು ಅವರು ನಟನೆ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡದಲ್ಲಿ ಲಭ್ಯವಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶಣ್ ಅವರು ಮತ್ತೆ ಜೈಲು ಸೇರಿದ್ದಾರೆ. ಅಲ್ಲಿ ಅವರಿಗೆ ನರಕಯಾತನೆ ಉಂಟಾಗುತ್ತಿದೆ. ಹೀಗಾಗಿ, ಅವರು ವಿಶೇಷ ಮನವಿ ಒಂದನ್ನು ಇಟ್ಟಿದ್ದಾರೆ. ‘ಕೈಯೆಲ್ಲಾ ಫಂಗಸ್ ಬಂದಿದೆ. ಬಿಸಿಲು ಕಾಣದೆ ತಿಂಗಳಾಯಿತು. ದಯವಿಟ್ಟು ವಿಷ ಕೊಟ್ಟುಬಿಡಿ’ ಎಂದು ದರ್ಶನ್ ಕೇಳಿದ್ದಾರೆ.
