ದರ್ಶನ್​ ಸ್ನೇಹಿತ ಪ್ರದೋಷ್​ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್

Edited By:

Updated on: Aug 29, 2024 | 4:26 PM

ಪ್ರದೋಶ್ ದಾಖಲಾತಿ ಸಮಯದಲ್ಲಿ ಹಿಂಡಲಗಾ ಜೈಲಿನ ಪೊಲೀಸರು ತೀವ್ರ ತಪಾಸಣೆ ಮಾಡಿದ್ದಾರೆ. ಪ್ರದೋಶ್ ಬ್ಯಾಗ್​ನಲ್ಲಿ ತಂದಿದ್ದ ಸಿರಪ್ ಅನ್ನು ಪೊಲೀಸರು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಪಡೆದ ಬಳಿಕ ನೀಡುವುದಾಗಿ ಹೇಳಿದ್ದಾರೆ. ಆತ ತಂದಿದ್ದ ಟೂತ್​ಪೇಸ್ಟ್ ವಾಸನೆ ನೋಡಿ ನಂತರ ವಾಪಸ್ ನೀಡಿಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳಲ್ಲಿ ಒಬ್ಬನಾದ ಪ್ರದೋಶ್​ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಆಗಿದ್ದಾನೆ. ಈ ಕೇಸ್​ನಲ್ಲಿ ಆತ 14ನೇ ಆರೋಪಿ ಆಗಿದ್ದಾನೆ. ಹಿಂಡಲಗಾ ಜೈಲಿನಲ್ಲಿ ಪ್ರದೋಶ್​ಗೆ ವಿಚಾರಣಾಧೀನ ಖೈದಿ ಸಂಖ್ಯೆ 2894 ನೀಡಲಾಗಿದೆ. ಬೆಂಗಳೂರಿನಿಂದ ಆತ 2 ಬ್ಯಾಗ್ ತೆಗೆದುಕೊಂಡು ಬಂದದ್ದ. ಹೆಚ್ಚು ತೂಕ ಇರುವ ಕಾರಣ ಬ್ಲಾಂಕೆಟ್ ಕೊಂಡೊಯ್ಯಲು ಪೊಲೀಸರು ನಿರಾಕರಣೆ ಮಾಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿರಪ್ ವಾಪಸ್​ ಕೊಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More