ಬದಲಾಗಲಿದೆ ದರ್ಶನ್ ವಿಚಾರಣಾಧೀನ ಖೈದಿ ಸಂಖ್ಯೆ; ಫ್ಯಾನ್ಸ್ ಮತ್ತೆ ಹಚ್ಚೆಹಾಕಿಸಿಕೊಳ್ತಾರಾ?

ಕೊಲೆ ಆರೋಪಿ ನಟ ದರ್ಶನ್​​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲು ನಿರ್ಧರಿಸಲಾಗಿದೆ. ಬಳ್ಳಾರಿ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸವಿದೆ. ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಖೈದಿ ಸಂಖ್ಯೆ ಚೇಂಜ್ ಆಗಲಿದೆ. ಬಳ್ಳಾರಿ ಖೈದಿಗಳಂತೆ ನಟ ದರ್ಶನ್‌ಗೂ ವಿಚಾರಣಾಧೀನ ಖೈದಿ ಸಂಖ್ಯೆ ಸಿಗಲಿದೆ.

ಬದಲಾಗಲಿದೆ ದರ್ಶನ್ ವಿಚಾರಣಾಧೀನ ಖೈದಿ ಸಂಖ್ಯೆ; ಫ್ಯಾನ್ಸ್ ಮತ್ತೆ ಹಚ್ಚೆಹಾಕಿಸಿಕೊಳ್ತಾರಾ?
ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 03, 2024 | 3:05 PM

ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿಚಾರಣಾಧೀನ ಖೈದಿ ನಂ. 6106 ನೀಡಲಾಗಿತ್ತು. ಇದನ್ನು ಫ್ಯಾನ್ಸ್ ಸಂಭ್ರಮಿಸಿ ಹಚ್ಚೆ ಹಾಕಿಸಿಕೊಂಡಿದ್ದರು. ಕೆಲವರು ಕಾರುಗಳಿಗೆ ಈ ಸಂಖ್ಯೆಯನ್ನು ಬರೆದುಕೊಂಡಿದ್ದರು. ಈಗ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್​ ಆಗಲಿದ್ದಾರೆ. ಇದರಿಂದ ಅವರು ವಿಚಾರಣಾಧೀನ ಖೈದಿ ಸಂಖ್ಯೆ ಕೂಡ ಬದಲಾಗಲಿದೆ. ಈಗ ದರ್ಶನ್ ಫ್ಯಾನ್ಸ್ ಮತ್ತೆ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಫ್ಯಾನ್ಸ್ ದರ್ಶನ್​ನ ಮೇಲೆ ಅಂಧಾಭಿಮಾನ ತೋರಿಸುತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಜೊತೆ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಯಿತು. ಅವರ ಖೈದಿ ಸಂಖ್ಯೆಯನ್ನು ಕೆಲವರು ಹಚ್ಚೆ ಹಾಕಿಸಿಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗೆ ಈ ನಂಬರ್​ನ ಸ್ಟಿಕ್ಕರ್ ಅಂಟಿಸಿದರು. ಅತ್ತ ಮಗನಿಗೆ ಖೈದಿ ಡ್ರೆಸ್ ಹಾಕಿಸಿ ಫೋಟೋಶೂಟ್ ಮಾಡಿಸೋ ಕೆಲಸವೂ ಆಯಿತು. ಈಗ ದರ್ಶನ್ ಫ್ಯಾನ್ಸ್ ಆರೋಪಿ ದರ್ಶನ್ ವಿಚಾರಣಾಧೀನ ಖೈದಿ ಸಂಖ್ಯೆ ಬದಲಾವಣೆ ಪಕ್ಕಾ ಆಗಿದೆ.

ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಖೈದಿ ಸಂಖ್ಯೆ ಚೇಂಜ್ ಆಗಲಿದೆ. ಬಳ್ಳಾರಿ ಖೈದಿಗಳಂತೆ ನಟ ದರ್ಶನ್‌ಗೂ ವಿಚಾರಣಾಧೀನ ಖೈದಿ ಸಂಖ್ಯೆ ಸಿಗಲಿದೆ. ಮೂರು ಅಂಕಿಯ ವಿಚಾರಣಾಧೀನ ನಂಬರ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಬ್ಯಾರಕ್​​ಗೆ ಶಿಫ್ಟ್​​​ ಮಾಡಲಾಗುತ್ತದೆ.

ಇದನ್ನೂ ಓದಿ: ದರ್ಶನ್​ ಶಿಫ್ಟ್​ ಆಗುವ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ 140 ವರ್ಷಗಳ ಇತಿಹಾಸ

ದರ್ಶನ್ ಅವರನ್ನು ನೋಡಲು ಈಗಲೇ ಬಳ್ಳಾರಿಯ ಕೇಂದ್ರ ಕಾರಾಗೃಹದ ಬಳಿ ಫ್ಯಾನ್ಸ್ ನೆರೆದಿದ್ದಾರೆ. ಜೈಲಿನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಇಂದು (ಆಗಸ್ಟ್​ 28) ವಿಚಾರಣೆ ಮಾಡಬೇಕಿದೆ. ಆ ಬಳಿಕ ಸ್ಥಳಮಹಜರು ನಡೆಯಲಿದೆ. ಇದಾದ ಬಳಿಕ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Wed, 28 August 24

ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ​​: ಬೆಂಕಿ ಬಿದ್ದಿದ್ದ ಬೈಕ್​ ಶೋರೂಂಗೆ ಹೆಚ್​ಡಿಕೆ ಭೇಟಿ
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ನಾಗಮಂಗಲ ಕೋಮುಗಲಭೆ ಕೇಸ್​​: ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Daily Devotional: ಎಕ್ಕದ ಗಣಪತಿಯ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
Nithya Bhavishya: ಈ ರಾಶಿಯವರಿಗೆ ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ